ಏಕ ಸೂತ್ರದಲ್ಲಿ ಅನೇಕ

Author : ಸಿ.ಬಿ.ಶೈಲಾ ಜಯಕುಮಾರ್

Pages 112

₹ 110.00




Year of Publication: 2019
Published by: ಹೆಚ್‌.ಎಸ್‌.ಆರ್‌.ಎ ಪ್ರಕಾಶನ
Phone: 7892793054

Synopsys

ಈ ಪುಸ್ತಕದೊಳಗಿರುವ ಎಲ್ಲಾ ಲೇಖನಗಳನ್ನು ಓದಿದ ಮೇಲೆ ಸಿ.ಬಿ. ಶೈಲಾಜಯಕುಮಾರ್ ಅವರು ವಿಭಿನ್ನವಾದ ಹಾಗೂ ಆಳವಾದ ಚಿಂತನಾ ಲಹರಿಯನ್ನು ಹೊಂದಿರುವ ಚಿಂತಕಿ ಎಂದು ಎನಿಸುತ್ತದೆ. ಪ್ರಬಂಧ ಅಥವಾ ಲೇಖನಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿರುವ ವಿಷಯಗಳೂ ಸಹ ಬಹಳ ವಿಶಿಷ್ಠವಾಗಿವೆ ಮತ್ತು ಅತ್ಯಂತ ಸರಳವಾಗಿವೆ. ಈ ಕೃತಿಯಲ್ಲಿಯಲ್ಲಿರುವ ಕೆಲ ಬರಹಗಳು ಬಾಹ್ಯ ಒತ್ತಡಕ್ಕೆ ಸಿಲುಕಿ ಅನಿವಾರ್ಯವಾಗಿ ಬರೆದವುಗಳಾಗಿದ್ದರೆ ಹಲವು ಬರಹಗಳು ಬಹಳ ಸಹಜವಾದ ಬರಹಗಳು ಎಂದೆನಿಸುತ್ತದೆ. ಈ ಸಹಜ ಬರಹಗಳು ನಮ್ಮ ನಿತ್ಯ ಜೀವನದ ಹಾಗೂ ಬಯಲುಸೀಮೆಯ ದಿನನಿತ್ಯದ ಜೀವನ ಚಟುವಟಿಕೆಗಳನ್ನು ಅನುಭವಿಸಿ ಬರೆದಂತಹ ಲೇಖನಗಳಾಗಿವೆ.

About the Author

ಸಿ.ಬಿ.ಶೈಲಾ ಜಯಕುಮಾರ್

ಸಿ.ಬಿ.ಶೈಲಾ ಜಯಕುಮಾರ್ ಅವರು ಮೂಲತಃ ಚಿತ್ರದುರ್ಗದವರು. MA (English) M Ed , Diploma in Journalism ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅವರು ಜೂನ್‌ 2020 ರಲ್ಲಿ ನಿವೃತ್ತಿ ಹೊಂದಿದರು. ಚಿತ್ರದುರ್ಗದ ಲೇಖಕಿಯರ ಕಥಾಸಂಕಲನದ 'ಮೊದಲ ಹೆಜ್ಜೆ' ಕೃತಿಯ ಸಂಪಾದಕಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ನುಡಿಗನ್ನಡಿ (ಆಕಾಶವಾಣಿಯ ನಲ್ನುಡಿಗಳ ಸಂಕಲನ), ಅಹಲ್ಯಾಂತರಂಗ, ಏಕಸೂತ್ರದಲ್ಲಿ ಅನೇಕ (ವೈಚಾರಿಕ ಲೇಖನಗಳ ಸಂಕಲನ) , ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ರಸಪ್ರಶ್ನೆಗಳು, ಉತ್ತರೆಯ ಸ್ವಗತ, ಇವರು ಚಿರಂಜೀವಿಗಳು.(ಪುರಾಣಗಳ ಚಿರಾಯುಗಳ ಬಗ್ಗೆ), ಅಂತಃಕರಣದ ...

READ MORE

Related Books