ಹಿಂದುಳಿದ ಪ್ರದೇಶ ಎಂತಲೇ ಹೆಸರಾಗಿರುವ ಹೈದರಾಬಾದ್ ಕರ್ನಾಟಕದ ಸಾಹಿತ್ಯ ಶ್ರೀಮಂತಿಕೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳನ್ನು ಬಸವರಾಜ ಕೋಡಗುಂಟಿ ಅವರು ಬರೆದಿದ್ದಾರೆ. ಈ ಸರಣಿಯಲ್ಲಿ ಊರು, ದರಗಾ, ಕೆರೆ, ಬಾವಿ, ಶಾಸನ, ಕೋಟೆ, ರಾಜಮನೆತನ, ಕನ್ನಡ, ಬುಡಕಟ್ಟು ಮೊದಲಾದವು. ವಿಶಿಷ್ಟವಾದ ಎಲ್ಲಮ್ಮ, ಅಲ್ಲಮಪ್ರಭು ಮೊದಲಾದ ಸಂಪುಟಗಳು ಇವೆ.
ಈ ಸರಣಿಯ ಮೊದಲ ಸಂಪುಟ ಊರು. ಸಮಾಜದ ಒಂದು ಸಣ್ಣ ಗಟಕ ಊರು.ಇದು ಜಾತಿ, ದೇವರು, ನಂಬಿಕೆ, ಆಚರಣೆಗಳು ಮತ್ತು ಅಧಿಕಾರ, ಮೇಲು-ಕೀಳು ರಚನೆ, ಜಾತಿ ಆಧಾರಿತ ಊರಿನ ರಚನೆ ಮೊದಲಾದ ಅಂಶಗಳನ್ನು ಒಳಗೊಂಡಿರುತ್ತದೆ.ಅದರೊಂದಿಗೆ ಇಂದಿನ ಆಧುನಿಕತೆ ಮತ್ತು ಜಾಗತೀಕರಣ ಮತ್ತು ಮಾಧ್ಯಮ ಜಗತ್ತನ್ನು ಊರು ಎದುರಿಸುವ ರೀತಿ ಇವುಗಳನ್ನು ತಿಳಿದುಕೊಳ್ಳುವುದು ಅವಶ್ಯ. ಈ ತಿಳಿವಳಿಕೆ ಒಟ್ಟೊಟ್ಟಿಗೆ ಊರಿನ ಇತಿಹಾಸವನ್ನು, ಆ ಊರಿನ ಸ್ಥಳೀಯ ಅವಶ್ಯಕತೆಗಳು, ಸಮಸ್ಯೆಗಳನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕ. ಹೀಗೆ ಪ್ರತಿಯೊಂದು ಊರಿನ ತಿಳುವಳಿಕೆಯನ್ನು ಸಾಮಾನ್ಯೀಕರಿಸಿ ಹಯ್ದರಾಬಾದ ಕರ್ನಾಟಕ ಪ್ರದೇಶವನ್ನು ತಿಳಿದುಕೊಳ್ಳುವುದಕ್ಕೆ ಸಾದ್ಯ.
ಹೈದರಾಬಾದ್ ಕರ್ನಾಟಕ ಭಿನ್ನ ಪ್ರದೇಶಗಳಲ್ಲಿ ಭಿನ್ನ ಸಾಧ್ಯತೆಗಳನ್ನು ಒಳಗೊಂಡಿದೆ. ಇದರಲ್ಲಿ ಬಂಗಾರದ ಗಣಿಯೂ ಸೇರಿ ಹಲವು ನಿಧಿ ನಿಕ್ಶೇಪಗಳು, ಅಕ್ಕಿ, ಹತ್ತಿ, ತೊಗರಿ ಸೇರಿ ಹಲವು ಬೆಳೆಗಳಿಗೆ ಸೂಕ್ತವಾದ ನೆಲ, ಸಿಮೆಂಟ್, ಸಕ್ಕರೆ, ಕಲ್ಲು ಮೊದಲುಗೊಂಡು ಹಲವಾರು ಕೈಗಾರಿಕೆ, ದೊಡ್ಡ ದೊಡ್ಡ ನಿಧಿಗಳ ಜೊತೆಗೆ ಸಣ್ಣ ಸಣ್ಣ ಹಳ್ಳಗಳ ಕುರಿತು ತೋರಿಸುತ್ತವೆ.
©2024 Book Brahma Private Limited.