ಕರ್ನಾಟಕದ ಇತಿಹಾಸದುದ್ದಕ್ಕೂ ಭಿನ್ನ ಕಾಲದಲ್ಲಿ ಭಿನ್ನ ವಲಯಗಳಲ್ಲಿ ಬೇರೆ ಬೇರೆ ಮಾತುಗಳು ಬೆಳೆದುಬಂದವು. ಈ ಹಿನ್ನೆಲೆಯಲ್ಲಿ ಕರ್‍ನಾಟಕ ರಾಜ್ಯದಲ್ಲಿ ಕನ್ನಡ ಪ್ರದಾನ ಂಆತು, ಅದರೊಂದಿಗೆ ದೊಡ್ಡ ಸಂಖ್ಯೆಯ ಮಾತುಗಳು ಇರುವ ಮತ್ತು ಕಡಿಮೆ ಸಂಖ್ಯೆಯ ಮಾತುಗಳು ಕಂಡುಬಂದಿವೆ. ಇವೆಲ್ಲವೂ ಕರ್‍ನಾಟಕದ ಬಹುತ್ವವನ್ನು ತೋರಿಸುತ್ತದೆ.
ನೋಟ-ಒಳನೋಟಗಳನ್ನು ಕೊಡುವ ಕರ್‍ನಾಟಕದ ಬಗ್ಗೆ ತಿಳಿಯುವುದಕ್ಕೆ ಈ ’ಕರ್‍ನಾಟಕದ ಮಾತುಗಳ” ಪುಸ್ತಕವು ಮುಖ್ಯವಾಗಿದೆ.
ಕರ್‍ನಾಟಕದ ಮಾತುಗಳನ್ನು ವಿವಿಧ ಆಯಾಮಗಳಲ್ಲಿ ನೋಡುವ, ಪ್ರಯತ್ನವನ್ನು ಈ ಕೃತಿ ಮಾಡಿದೆ. ಇಲ್ಲಿನ ಬರವಣಿಗೆಗಳು ಪರಿಚಯಾತ್ಮಕವಾಗಿದ್ದರೂ ಓದುಗರಿಗೆ ಹೊಸ ಆಲೋಚನೆ ನೀಡುವಂತದ್ದಾಗಿದೆ. ಕನ್ನಡ ಮತ್ತು ಕರ್‍ನಾಟಕದ ಬಗ್ಗೆ ಅಧ್ಯಯನ ನಡೆಸುವ ಸಂಶೋಧಕರಿಗೆ, ಆಸಕ್ತರಿಗೆ ಈ ಪುಸ್ತಕ ಉತ್ತಮ ಕೈಪಿಡಿಯಾಗಿದೆ.
©2024 Book Brahma Private Limited.