ಮ.ರಾಮಮೂರ್ತಿ ಅವರ ನಾಡು ನುಡಿಯ ಚಿಂತನೆ

Author : ರಾ.ನಂ. ಚಂದ್ರಶೇಖರ್

Pages 208

₹ 150.00




Year of Publication: 2018
Published by: ಅಂಕಿತ ಪುಸ್ತಕ
Address: ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು

Synopsys

ಕನ್ನಡ ಚಳವಳಿಯ ಹರಿಕಾರ ಕನ್ನಡ ಪರ ಹೋರಾಟಗಾರ ಮ.ರಾಮಮೂರ್ತಿಯವರು ಕನ್ನಡಕ್ಕೆ ಸಲ್ಲಿಸಿದ ಸೇವೆಯನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.ಕನ್ನಡದ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವಲ್ಲಿ ಅವರ ಕೊಡುಗೆ ಮಹತ್ವದ್ದು.ಯಾವುದೇ ಚಳವಳಿಗೆ ಕನ್ನಡ ಕಾರ್ಯಕರ್ತರೇ ಸೈನಿಕರು.ಕನ್ನಡ ಜನತೆಯ ಸರ್ವತೋಮುಖ ಹಿತರಕ್ಷಣೆಗಾಗಿ, ಕನ್ನಡ ನಾಡಿನಲ್ಲಿ ಕನ್ನಡಿಗನಿಗೆ ಪ್ರಾಧಾನ್ಯತೆ ಗಳಿಸಿಕೊಡುವುದಕ್ಕಾಗಿ ಅವರು ಮಾಡಿರುವ ಕೆಲಸ ಬಲುದೊಡ್ಡದು.ಅವರಲ್ಲಿ ಹೋರಾಟದ ಕಿಚ್ಚನ್ನು ಹೂರಿದುಂಬಿಸುವ ಕಾರ್ಯವನ್ನು ತನ್ನ ಲೇಖನಿ ಮೂಲಕ ಮಾಡಿದ್ದಾರೆ.ಈ ಕೃತಿಯು ಕನ್ನಡಿಗರಿಗೆ ಹಾಗೂ ಕನ್ನಡಕ್ಕಾಗಿ ಕೆಲಸ ಮಾಡುವ ಕಟ್ಟಾಳುಗಳಿಗೆ ಎಂದಿಗೂ ಮಾರ್ಗದರ್ಶನವಾಗಿದೆ.

About the Author

ರಾ.ನಂ. ಚಂದ್ರಶೇಖರ್

ಕನ್ನಡದ ಹಿರಿಯ ಹೋರಾಟಗಾರ, ಸಾಹಿತಿ, ರಾ.ನಂ. ಚಂದ್ರಶೇಖರ ಅವರು ಕಳೆದ ಮೂರ್ನಾಲ್ಕು ದಶಕಗಳಿಂದ ಬರವಣಿಗೆಯ ಮೂಲಕ ಕನ್ನಡ ಭಾಷಾ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಕರ್ನಾಟಕ ಚೂಡಾಮಣಿ, ಕನ್ನಡ ರತ್ನ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಕನ್ನಡ ಬಾವುಟದ ರೂವಾರಿ, ಹಿಮಾಲಯದಲ್ಲಿ ಕನ್ನಡ ಧ್ಯಾನ, ಕನ್ನಡದ ವೀರ ಸೇನಾನಿ ಮ. ರಾಮಮೂರ್ತಿ, ವಿಮಾನ ಯಾನ ಮುಂತಾದವು.  ...

READ MORE

Related Books