ಕರ್ಣಾಟಕ ಕವಿ ಚರಿತೆಯ ಮೊದಲ ಸಂಪುಟವಾದ ಈ ಕೃತಿಯನ್ನು ರಚಿಸಿದವರು ಆರ್. ನರಸಿಂಹಾಚಾರ್. ಸುಮಾರು 50 ಪುಟಗಳಷ್ಟು ಪ್ರಸ್ತಾವನೆ ಬರೆದಿದ್ದು, ಕೃತಿಯ ಗಂಭೀರ ಅಧ್ಯಯನದ ದ್ಯೋತಕವಾಗಿದೆ. ಪಂಚ ದ್ರಾವಿಡ ಭಾಷೆಗಳ ಪೈಕಿ ಕನ್ನಡವೂ ಒಂದು. ಈ ಪಂಚದ್ರಾವಿಡ ಭಾಷೆಗಳ ವಿಸ್ತಾರವಾದ ಇತಿಹಾಸದ ವಿವರವಿದ್ದು, ಕನ್ನಡ ಭಾಷೆಯ ಪ್ರಾಚೀನತೆ, ವ್ಯುತ್ಪತ್ತಿ, ಗಣಿತ, ಛಂದ, ಅಲಂಕಾರ, ಕಾಮ, ವೈದ್ಯ, ಪಾಕ, ಸ್ವರ, ರತ್ನ, ಸಾಮುದ್ರಿಕ, ಜೀವನ ವೃತ್ತಾಂತಗಳು ಹೀಗೆ ವಿವಿಧ ಜ್ಞಾನಶಾಖೆಗಳಿಗೆ ಸಂಬಂಧಿಸಿದ ಸಾಹಿತ್ಯದ ಇತಿಹಾಸದ ಮಾಹಿತಿಯನ್ನು ವಿಸ್ತೃತವಾಗಿ ನೀಡಲಾಗಿದೆ.
ಮದ್ರಾಸ್ ವಿಶ್ವವಿದ್ಯಾಲಯದಿಂದ ಮೊಟ್ಟ ಮೊದಲನೆಯ ಕನ್ನಡ ಎಂ.ಎ. ಪದವಿ ಪಡೆದ ಆರ್. ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ‘ಕವಿಚರಿತೆ’ಕಾರ ಎಂದೇ ಚಿರಪರಿಚಿತರು. ಸಂಶೋಧಕ ಮತ್ತು ಶಾಸನ ತಜ್ಞರೂ ಆಗಿದ್ದ ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಕರಲ್ಲಿ ಒಬ್ಬರು. ಮಂಡ್ಯದ ಕೊಪ್ಪಲು ಗ್ರಾಮದಲ್ಲಿ 1860ರ ಏಪ್ರಿಲ್ 9ರಂದು ಜನಿಸಿದ ಆರ್. ನರಸಿಂಹಾಚಾರ್ ಅವರ ತಂದೆ ತಿರುನಾರಾಯಣ ಪೆರುಮಾಳ್ ಮತ್ತು ತಾಯಿ ಶಿಂಗಮ್ಮಾಳ್. ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮದ್ರಾಸಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ಮೆಟ್ರಿಕ್ ಪಾಸಾದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ 1882ರಲ್ಲಿ ...
READ MORE