ರಾ. ನರಸಿಂಹಾಚಾರ್ ಅವರು ಬರೆದ `ಕರ್ಣಾಟಕ ಕವಿ ಚರಿತೆ-ಸಂಪುಟ--3' ಒಂದು ಗಮನಾರ್ಹ, ಸದಾ ಕಾಯ್ದಿಟ್ಟುಕೊಳ್ಳಬೇಕಾದ ಕೃತಿ. ಈ ಕೃತಿಯಲ್ಲಿ ದ್ರಾವಿಡ ಭಾಷೆಗಳು, ಸಾಂಸ್ಕೃತಿಕ ಆಚರಣೆಗಳು, ನಾಗರಿಕತೆ ಹಾಗೂ ಸಂಸ್ಕೃತ ಭಾಷೆಯಿಂದ ದ್ರಾವಿಡ ಭಾಷೆ ಹೇಗೆ ಭಿನ್ನ, ಗೌಡ ಭಾಷೆಗಳು, ಕನ್ನಡಿಗರ ನಾಗರಿಕತೆ, ವಚನಕಾರರು, ಪ್ರಾಚೀನ ಕನ್ನಡದ ಕವಿಗಳು, ಗ್ರಂಥಕರ್ತರ ಪಟ್ಟಿ, ನಾಗಚಂದ್ರ, ರುದ್ರಭಟ್ಟ, ಸುಮನೋಬಾಣ, ನಾಗವರ್ಮ, ಸೋಮರಾಜ, ಸಿಂಗೀರಾಜ, ಲಕ್ಷ್ಮೀಶ, ಗೊಮ್ಮಟೇಶ್ವರ ಪ್ರತಿಷ್ಠೆ, ಹೀಗೆ ಕನ್ನಡ ಸಾಹಿತ್ಯದ ಆದಿಯಿಂದ ಹಿಡಿದು 19ನೇ ಶತಮಾನದ ಆರಂಭದ ಕಾಲದವರೆಗೂ ಕನ್ನಡ ಸಾಡಿನ ಸಾಹಿತ್ಯ ಚರಿತ್ರೆಯನ್ನು ಸುದೀರ್ಘವಾಗಿ ಕಟ್ಟಿಕೊಟ್ಟ ಸಂಶೋಧನಾತ್ಮಕ, ಮಾಹಿತಿ ಪೂರ್ಣ ಹಾಗೂ ಕನ್ನಡ ಸಾಹಿತ್ಯ ಚರಿತ್ರೆಗೆ ಕರೀಟಪ್ರಾಯದ ಕೃತಿ ಇದು.
ಒಟ್ಟು 32 ಪುಟಗಳ ವಿಷಯ ಪರಿವಿಡಿ, 58ಪುಟಗಳ ಇಂಗ್ಲಿಷ್ ಹಾಗೂ 100 ಪುಟಗಳ ಕನ್ನಡ ಪ್ರಸ್ತಾವನೆಯನ್ನು ಲೇಖಕರು ಬರೆದಿದ್ದು, ಗಂಭೀರ ಅಧ್ಯಯನದ ದ್ಯೋತಕವಾಗಿ ಇವು ಕನ್ನಡಿ ಹಿಡಿಯುತ್ತವೆ.
©2024 Book Brahma Private Limited.