ನಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಶೋಧಿಸುವ, ದಾಖಲಿಸುವ ಕಾರ್ಯದಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ದೊಡ್ಡದು. ಕನ್ನಡ ನಾಡಿನಲ್ಲಿ ಕ್ರೈಸ್ತ ಮಿಷನರಿಗಳು, ಅದರ ಪ್ರತಿನಿಧಿಗಳಾಗಿ ಬಂದ ಹಲವು ವಿದ್ವಾಂಸರು ಮಾಡಿದ ಗಣನೀಯ ಕೆಲಸವನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಕ್ರೈಸ್ತ ಮಿಷನರಿಗಳು, ಪ್ರಾದೇಶಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಲ್ಲಿನ ಜನರ ಅಗತ್ಯತೆಗಳನ್ನು ಅರಿತುಕೊಂಡು ನಂತರ ಧರ್ಮಪ್ರಚಾರ ಮಾಡಿದರು. ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಶಾಲೆಗಳನ್ನು ತೆರೆದರು. ಹಲವು ಕ್ರೈಸ್ತ ವಿದ್ವಾಂಸರ ಕನ್ನಡದ ಕೆಲಸಗಳು ಮತ್ತು ಅದರಿಂದ ಕನ್ನಡಕ್ಕೆ ಉಂಟಾದ ಉಪಯೋಗಗಳನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.