`ಹಾನಗಲ್ ತಾಲ್ಲೂಕು ದರ್ಶನ’ ಕೃತಿಯು ಷಣ್ಮುಖಪ್ಪ ಮುಚ್ಚಂಡಿ ಅವರ ಲೇಖನಸಂಕಲನವಾಗಿದೆ. ಈ ಕೃತಿಯು ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಹಾನಗಲ್ ತಾಲ್ಲೂಕಿನ ಸಾಂಸ್ಕೃತಿಕ ನೆಲೆಗಳು, ಪಲ್ಲಟಗಳು ಹೀಗೆ ಹಲವಾರು ಸಂಗತಿಗಳನ್ನು ಇಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಹಾನಗಲ್ಲಿನ ಈಶಾನ್ಯಕ್ಕೆ 10 ಕಿಮೀ ದೂರದಲ್ಲಿರುವ ಅರಳೇಶ್ವರ ಗ್ರಾಮದ ಬಳಿ ಚಾಳುಕ್ಯ ಶೈಲಿಯ ಕದಂಬೇಶ್ವರ ದೇವಾಲಯವಿದೆ ಎಂಬುದನ್ನು ಈ ಕೃತಿ ತಿಳಿಸುತ್ತದೆ.