‘ಹಾವೇರಿ ಜಿಲ್ಲಾ ಸಾಧಕರ ಮಾಲೆ 23’ ಕೃತಿಯು ಎಸ್.ಬಿ. ಚನ್ನಗೌಡ್ರ, ಸರೋಜಿನಿ ಪಡಸಲಗಿ, ಸರ್ವಜೀತ ಅವರ ವ್ಯಕ್ತಿಚಿತ್ರಣ ಸಂಕಲನವಾಗಿದೆ. ಸರ್ವಜ್ಞ ಕರ್ಜಗಿ ಶ್ರೀದ ವಿಠಲದಾಸರು, ಶಾಂತಕವಿ ಸಕ್ಕರಿ ಬಾಳಾಚಾರ್ಯ ಅವರ ಚಿತ್ರಣಗಳು ಇಲ್ಲಿವೆ. ಆಧುನಿಕ ಕರ್ನಾಟಕ ನಾಟಕ ಪಿತಾಮಹ, ಕೀರ್ತನಕಾರರೆಂದು ಎಂದು ಪ್ರಸಿದ್ಧರಾದ ಶಾಂತಕವಿಗಳ ಪೂರ್ಣ ಹೆಸರು ಸಕ್ಕರಿ ಬಾಳಾಚಾರ್ಯ ಕುರಿತು ವಿಚಾರಧಾರೆಗಳನ್ನು ನೀಡಲಾಗಿದೆ. ಈ ಕೃತಿಯು ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.