ಲೇಖಕ ತ.ಸು. ಶಾಮರಾಯ ಅವರ ಇತಿಹಾಸ ಸಂಬಂಧಿ ಕೃತಿ ʻಕನ್ನಡ ಸಾಹಿತ್ಯ ಚರಿತ್ರೆʼ. ಪುಸ್ತಕವು ಕನ್ನಡ ಸಾಹಿತ್ಯದ ಉಗಮ, ಬೆಳವಣಿಗೆಯ ಬಗ್ಗೆ ಹೇಳುತ್ತದೆ. ತಾಳಗುಂದದ ಸಿಂಹಕಟಾಂಜನ ಶಾಸನ, ಬಾದಾಮಿ ಶಾಸನಗಳು ಸೇರಿದಂತೆ ಹಲವಾರು ಶಾಸನಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಪುರಾವೆಗಳಿವೆ. ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಕರೆಯಲಾಗುತ್ತದೆ. ಈ ಕಾಲದಲ್ಲಿ ಪ್ರಸಿದ್ದತೆಯನ್ನು ಪಡೆದ ಪಂಪ ಕವಿಯ ವಿಕ್ರಮಾರ್ಜುನ ವಿಜಯ ಇವತ್ತಿಗೂ ಮುಖ್ಯ ಕೃತಿಯಾಗಿ ನಿಂತಿದೆ. ನಂತರ ಬಂದ ನಡುಗನ್ನಡದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯಗಳು ಬೆಳಕಿಗೆ ಬಂದವು. ಕುಮಾರವ್ಯಾಸ ಈ ಸಮಯದಲ್ಲಿ ಪ್ರಭಾವವನ್ನು ಪಡೆದ ಕವಿ. ಇವರ ಜೀವನ ಕೃತಿ ʻಕರ್ನಾಟ ಭಾರತ ಕಥಾಮಂಜರಿʼ ಇಂದಿಗೂ ಮೇರು ಕೃತಿಯಾಗಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು, ಶಿವರಾಮ ಕಾರಂತ, ಟಿ.ಪಿ. ಕೈಲಾಸಂ ಸೇರಿದಂತೆ ಹಲವಾರು ಲೇಖಕರು ಸಾಹಿತ್ಯ ಕ್ಷೇತ್ರದಲ್ಲಿ ಹೊಸ- ಹೊಸ ಪ್ರಕಾರಗಳನ್ನು ತರುವ ಮೂಲಕ ನೂತನ ಹುಟ್ಟು ಹಾಕಿದ್ದಾರೆ. ಹೀಗೆ ಕನ್ನಡ ಸಾಹಿತ್ಯಕ್ಕೆ ಸಂಬಂಧ ಪಟ್ಟ ಹಲವಾರು ಮಾಹಿತಿಗಳನ್ನು ಶಾಮರಾಯ ಅವರು ಕೃತಿಯಲ್ಲಿ ಹೇಳಿದ್ದಾರೆ.
©2024 Book Brahma Private Limited.