ವಿರಾಜಪೇಟೆ ತಾಲೂಕಿನ ಸ್ಥಳನಾಮಗಳು ಲಲಿತ ಕೆ.ಪಿ ಅವರ ಕೃತಿಯಾಗಿದೆ. 'ಕೊಡಗಿನ ಸಂಸ್ಕೃತಿ-ಚರಿತ್ರೆ ಎಂದರೆ ಕೊಡವರ ಸಂಸ್ಕೃತಿ- ಚರಿತ್ರೆ ಎಂದಲ್ಲ.' ಅವರು ದಾಖಲಿಸುವಂತೆ, ಇಂದು, ಕೊಡಗಿನಲ್ಲಿ ಕೊಡವರು ಬಹುಸಂಖ್ಯಾತರಾಗಿದ್ದರೂ ಅವರೊಡನೆಯೇ ಇತರ ಸಮುದಾಯಗಳೂ ಇವೆ - ಎರವ, ಕುರುಬ, ಗೌಡ, ತುಳುವರು, ತೆಲುಗರು, ಮಲಯಾಳಿಗಳು, ಕನ್ನಡಿಗರು, ಇತ್ಯಾದಿ; ಮತ್ತು ಅವರೆಲ್ಲರ ಸಂಸ್ಕೃತಿಯೂ ಒಟ್ಟಾರೆಯಾಗಿ ಕೊಡಗಿನ ಸಂಸ್ಕೃತಿಯನ್ನು ರೂಪಿಸಿದೆ. ಈ ಕಾರಣದಿಂದ, ತಮ್ಮ ಅಧ್ಯಯನದಲ್ಲಿ ಆ ಸಮುದಾಯಗಳ ಚರಿತ್ರೆ ಹಾಗೂ ಬದುಕಿನ ರೀತಿ-ನೀತಿಗಳನ್ನೂ ಲಲಿತಾ ಅವರು ದಾಖಲಿಸುತ್ತಾರೆ. ಕೊಡಗು ಪ್ರಾಂತ್ಯದ ಬಗ್ಗೆ ಬಂದಿರುವ ಸ್ಥಳನಾಮ ಅಧ್ಯಯನ ಕ್ಷೇತ್ರದಲ್ಲಿ ಈ ಸಂಶೋಧನೆಯೇ ಮೊದಲನೆಯದೆಂದು ಡಾ. ಲಲಿತಾ ಕೆ. ಪಿ. ನಮಗೆ ತಿಳಿಸುತ್ತಾರೆ. ಅವರ ಈ ಮೌಲಿಕ ಸಂಶೋಧನೆ ಇತರ ಸಂಶೋಧನೆಗಳಿಗೂ ಸ್ಫೂರ್ತಿದಾಯಕವಾಗಲಿ ಮತ್ತು ಈ ಪ್ರಬಂಧವು ಆದಷ್ಟು ಬೇಗ ಮುದ್ರಿತ ಪದದಲ್ಲಿ ಓದುಗರಿಗೆ ದೊರೆಯುವಂತಾಗಲಿ ಎಂದು ನಾನು ಆಶಿಸುತ್ತೇನೆ ಎಂದು ಸಿ. ಎನ್. ರಾಮಚಂದ್ರನ್ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.