ಕನ್ನಡ ನಾಡಿನ ಬಹುತೇಕ ಕವಿಗಳ ಹೆಸರು, ಅವರ ಸಾಹಿತ್ಯದ ಹಿರಿಮೆ ಕುರಿತು ಶಾಸನಗಳಲ್ಲಿ ಉಲ್ಲೇಖವಾಗಿದ್ದು, ಅಂತಹ ಶಾಸನಗಳ ಪಠ್ಯವನ್ನು ಲೇಖಕ ಆರ್. ನರಸಿಂಹಾಚಾರ್ಯರು ಸರಳ ಕನ್ನಡಕ್ಕೆ ಅನುವಾದಿಸಿದ ಬೃಹತ್ ಕೃತಿ ಇದು. ಕನ್ನಡ ನಾಡಿನ ಯಾವ ಪ್ರದೇಶದ ಕವಿ ಎಂದು ತಿಳಿಯದಿದ್ದರೂ ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಅವರ ಹೆಸರನ್ನು ಆಧರಿಸಿಯೂ ಪಠ್ಯವನ್ನು ತಯಾರಿಸಿದೆ. ಕವಿ. ಕವಿತೆಯ ಶೈಲಿ ಹಾಗೂ ರಸದ ಸ್ವಾದವನ್ನು ವಿವರಿಸಿದ್ದು ಈ ಕೃತಿಯ ವೈಶಿಷ್ಟ್ಯ.
‘ಕೃತಿಯ ರಚನೆಗೆ ಬಳಸಿದ ಶಾಸನಗಳ ಸಂಖ್ಯೆ-283. ಈ ಪೈಕಿ ಬಾಂಬೆ ಕರ್ಣಾಟಕಕ್ಕೆ 24 ಶಾಸನಗಳು ಸೇರಿವೆ. ಉಳಿದವು ಮೈಸೂರು ಪ್ರಾಂತ್ಯದಲ್ಲಿವೆ. ಒಟ್ಟು ಶಾಸನಗಳಿರುವ ಪ್ರದೇಶಗಳು-56. ಆ ಪೈಕಿ ಮೈಸೂರು ಸಂಸ್ಥಾನ ಪ್ರದೇಶ ವ್ಯಾಪ್ತಿಯಲ್ಲಿ-36 ಮತ್ತು ಬಾಂಬೆ ಪ್ರಾಂತ್ಯದಲ್ಲಿ -20 ಪ್ರದೇಶಗಳು. ಶಾಸನಗಳಲ್ಲಿರುವ ಕವಿತಾ ಶೈಲಿಯೇ ಪಠ್ಯ ಅನುವಾದ ಆಯ್ಕೆ ಕಾರಣವಲ್ಲ; ಬದಲಾಗಿ, ಆಗಿನ ಸಾಮಾಜಿಕ-ರಾಜಕೀಯ ಸನ್ನಿವೇಶಗಳನ್ನು ಸಹ ಪರಿಗಣಿಸಲಾಗಿದೆ. ಪ್ರಜೆಗಳ ಶೌರ್ಯ, ಉದಾತ್ತತೆ, ದೈವಭಕ್ತಿ, ದೇಶವಾತ್ಸಲ್ಯಗಳನ್ನು ಶಾಸನಗಳಲ್ಲಿ ಮುಕ್ತವಾಗಿ ಪ್ರಶಂಸಿಸಲ್ಪಟ್ಟಿವೆ. ಶಾಸನಗಳ ಕ್ಲಿಷ್ಟಪದಗಳಿಗೆ ಸರಳ ಅರ್ಥ ವಿವರಣೆಯನ್ನೂ ಅನುವಾದಿಸಿ ನೀಡಿದ್ದು, ಈ ಕೃತಿಯು ಕರ್ಣಾಟಕದ ಕವಿ ಚರಿತೆ ಮಾತ್ರವಲ್ಲ; ಕಾವ್ಯತ್ವದ ರಸಸ್ವಾದವನ್ನೂ ಉಣಬಡಿಸುವಂತಿದೆ.
©2024 Book Brahma Private Limited.