15 ರಿಂದ 17ನೇ ಶತಮಾನದವರೆಗೆ ಕರ್ಣಾಟಕ ಕವಿ ಚರಿತೆಯನ್ನು ಕನ್ನಡ ನಾಡು-ನುಡಿಯ ಚಿಂತಕ ಆರ್. ನರಸಿಂಹಾಚಾರ್ಯ ಅವರು ಸಂಕಲಿಸಿದ ಬೃಹತ್ ಕೃತಿ ಇದು. 20 ಪುಟದ ವಿಷಯ ಪರಿವಿಡಿ, 20 ಪುಟದ ಇಂಗ್ಲಿಷ್ ಪ್ರಸ್ತಾವನೆ ಹಾಗೂ 35 ಪುಟದಷ್ಟು ಕನ್ನಡ ಪ್ರಸ್ತಾವನೆಯ ಈ ಕೃತಿಯಲ್ಲಿ ಕನ್ನಡ ನಾಡಿನ ಪ್ರಾಚೀನತೆ, ಕನ್ನಡ ನಾಡಿನ ಮಹಿಮೆ, ಕನ್ನಡಿ ನಾಡಿಗೆ ಪ್ರೋತ್ಸಾಹ, ದಕ್ಷಿಣೋತ್ತರ ಮಾರ್ಗಗಳು, ಕರ್ಣಾಟಕ ಕವಿ ಚರಿತೆಯ ದ್ವಿತೀಯ ಸಂಪುಟದ ಮಹತ್ವ ಇವೆಲ್ಲವನ್ನೂ ಲೇಖಕರು ವಿಸ್ತಾರವಾಗಿ ವಿವರಿಸಿದ್ದಾರೆ. ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ಇದೇ ಲೇಖಕರು ಬರೆದ ಕರ್ಣಾಟಕ ಕವಿ ಚರಿತೆಯ ಮೂರು ಪ್ರತ್ಯೇಕ ಸಂಪುಟಗಳು ಶಾಶ್ವತವಾಗಿ ಉಳಿಯುವ ಗ್ರಂಥಗಳು.
©2024 Book Brahma Private Limited.