ಎಂ. ಎಚ್. ಕೃಷ್ಣಯ್ಯ, ಡಾ. ವಿಜಯಾ ಹಾಗೂ ಸಿ.ಆರ್. ಕೃಷ್ಣರಾವ್ ರಚಿಸಿದ ಕೃತಿ-ಕರ್ನಾಟಕ ಕಲಾ ದರ್ಶನ. ಈ ಕೃತಿಗೆ ಭಾರತೀಯ ಪ್ರಕಾಶಕರ ಒಕ್ಕೂಟದ ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ(2011) ಲಭಿಸಿದೆ. ಕರ್ನಾಟಕ ಸಾಂಸ್ಕೃತಿಕ ಲೋಕದ ವೈಭವವನ್ನುಸುಮಾರು 4 ಸಾವಿರಕ್ಕೂ ಅಧಿಕ ಕಪ್ಪು-ಬಿಳುಪು ಹಾಗೂ ಬಣ್ಣಬಣ್ಣದ ಚಿತ್ರಗಳ ಸಮೇತ ಕಟ್ಟಿಕೊಡುವ ಕೃತಿ ಇದು. ಜನಪದ, ನೃತ್ಯ, ಸಾಹಿತ್ಯ, ಸಂಗೀತ, ಸಿನಿಮಾ ಹೀಗೆ 9 ಕ್ಷೇತ್ರಗಳಲ್ಲಿಯ ಗಣ್ಯ ವ್ಯಕ್ತಿಗಳ ಪರಿಚಯ ಹಾಗೂ ಸಾಧನೆಗಳನ್ನು ಚಿತ್ರಸಮೇತ ವಿವರಿಸಲಾಗಿದೆ. ಎರಡು ಸಾವಿರ ವರ್ಷದ ಹಿಂದಿನ ಸಾಂಸ್ಕೃತಿ ಕ ಇತಿಹಾಸವನ್ನು ಎರಡು ಬೃಹತ್ ಸಂಪುಟದ ಜೊತೆಗೆ ಸಾಂದ್ರಮುದ್ರಿಕೆ ಸಹ ನೀಡಲಾಗುತ್ತದೆ.
©2024 Book Brahma Private Limited.