ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆ

Author : ಎಂ.ಚಿದಾನಂದ ಮೂರ್ತಿ

Pages 100




Published by: ಕನ್ನಡ ಗೆಳೆಯರ ಬಳಗ
Address: ಕತ್ರಿಗುಪ್ಪೆ ಬೆಂಗಳೂರು
Phone: 080-26794508

Synopsys

ತಿಳಿಯಾದ, ತೆಳುವಾದ ಇತಿಹಾಸದ ಪರಿಚಯವನ್ನಷ್ಟೇ ಮಾಡಿಕೊಡುವುದು ಕೃತಿಯ ಉದ್ದೇಶ. ಮೊದಲ ಅಧ್ಯಾಯದಲ್ಲಿ ಕರ್ನಾಟಕ, ಈ ಹೆಸರಿನ ಹಿನ್ನೆಲೆ, ಪ್ರಾಚೀನತೆಯನ್ನು ಅವರು ಚರ್ಚಿಸುತ್ತಾರೆ. ಇತಿಹಾಸ ಪೂರ್ವ ಯುಗದಲ್ಲಿ ಕರ್ನಾಟಕದ ಅಸ್ತಿತ್ವವನ್ನು ಅವರು ತಡಕಾಡುತ್ತಾರೆ. ಭಾರತದಲ್ಲಿ ಕಬ್ಬಿಣದ ಯುಗ ಆರಂಭವಾದುದು ಕರ್ನಾಟಕದಲ್ಲಿ ಎಂದು ಅವರು ಅಭಿಪ್ರಾಯಪಡುತ್ತಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರಾಚೀನತೆಯನ್ನೂ ಈ ಅಧ್ಯಾಯದಲ್ಲಿ ಚರ್ಚಿಸುತ್ತಾರೆ. ನಾಲ್ಕನೆ ಅಧ್ಯಾಯದಲ್ಲಿ ಕರ್ನಾಟಕದ ಮೊದಲ ದೊರೆಗಳ ಹಿನ್ನೆಲೆಗಳನ್ನು ಅವರು ಬರೆಯುತ್ತಾರೆ. ಕರ್ನಾಟಕವನ್ನು ಆಳಿದ ಮೊದಲ ಅಚ್ಚ ಕನ್ನಡ ದೊರೆಗಳು ಕದಂಬರು ಎಂದು ಅವರು ಅಭಿಪ್ರಾಯಪಡುತ್ತಾರೆ. ಬನವಾಸಿ, ಕದಂಬರ ಬಗ್ಗೆ ಹೇಳುವಾಗ ಚಿದಾನಂದ ಮೂರ್ತಿಯವರು ಬ್ರಾಹ್ಮಣ್ಯವನ್ನು ಎತ್ತಿ ಹಿಡಿಯುವ ಜನಪ್ರಿಯ ಇತಿಹಾಸವನ್ನೇ ಇಲ್ಲಿ ಮುಂದಿಡುತ್ತಾರೆ. ಹಾಗೆಯೇ ಗಂಗರು, ಆತಕೂರು ವೀರಗಲ್ಲು, ಬಾದಾಮಿ ಚಾಲುಕ್ಯರು, ಇಮ್ಮಡಿ ಪುಲಿಕೇಶಿ, ಮೊದಲಾದವರ ಈ ಕೃತಿಯಲ್ಲಿ ಸರಳವಾದ ವಿವರಗಳಿವೆ.

Related Books