ಮಹಿಳೆಗೊಂದು ಭಾಷೆ ಬೇಕು ಅವಳ. ಭಾಷೆಗಳನ್ನ ವ್ಯಕ್ತಪಡಿಸಲು ಅವಳನ್ನ ಪ್ರತಿನಿಧಿಸುವ ಲಿಂಗ ತಟಸ್ಥ ಭಾಷೆ ಹೊಂದುವುದು ಅಗತ್ಯವಾಗಿ ಆಗಬೇಕು ಎಂಬ ಬಹು ಮಹತ್ವದ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ಕೃತಿ ರಚನೆಗೊಂಡಿದೆ. ಕನ್ನಡದಲ್ಲಿ ಇದುವರೆಗೂ ಗಮನಿಸಬೇಕಾಗಿರುವ ಕೆಲವು ಅಂಶಗಳನ್ನು ಇಟ್ಟುಕೊಂಡು ಈ ಕೃತಿಯನ್ನು ರೂಪಿಸುವ ಪ್ರಯತ್ನ ಮಾಡಲಾಗಿದೆ. ಇದು ಈ ಕೃತಿಯ ತಳಪಾಯವಾಗಿದೆ ಇದರ ಮೇಲೆ ಭವ್ಯ ವೃಕ್ಷವೇ ಬೆಳೆಯಬೇಕಿದೆ. ಸಮಾಜ ಪುರುಷ ಪ್ರಧಾನವಾಗಿದೆ. ಸಮಾಜದ ಪ್ರತಿಯೊಂದು ಆಲೋಚನಾ ಕ್ರಮವೂ ಪುರುಷ ಪ್ರಧಾನವನ್ನು ಮಾತ್ರವೇ ಒಳಗೊಳ್ಳುವ ಬಗೆಯದ್ದಾಗಿದೆ. ಈ ಸಮಾಜದ ಮಹಿಳೆಯನ್ನು ಎಲ್ಲ ರಂಗದಲ್ಲೂ ಕಡೆಗಣಿಸಿದೆ ಮತ್ತು ತಾರತಮ್ಯತೆಯಿಂದ ಕಾಣುತ್ತಾ ಬರುತ್ತಿದೆ ಈ ಮನೋಧೋರಣೆ ಇಂದಿನದಲ್ಲ. ಶತಮಾನದ ಯುದ್ಧಕ್ಕೂ ಕಂಡು ಬರುತ್ತದೆ. ಈ ಅಂಶಗಳನ್ನು ಭಾಷೆಯಲ್ಲಿ ಸ್ಪಷ್ಟವಾಗಿವೆ ಎಂಬುದು ಒಂದು ಮಹತ್ವದ ಅಂಶವಾಗಿದೆ. ನಾವು ಮಾತನಾಡುತ್ತಿರುವಂತಹ ಭಾಷೆಯಲ್ಲಿ ಹೆಣ್ಣಿಗೆ ಜಾಗವಿಲ್ಲ. ಅವಳಿಗೆ ಅವಳ ಅಭಿಪ್ರಾಯಗಳನ್ನು ಮಂಡಿಸುವುದಕ್ಕೆ ಅವಳಿಗೆ ಸಾಧ್ಯವಾಗುತ್ತಿಲ್ಲ ಈ ಭಾಷೆ ಪುರುಷನ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ಪೋಷಿಸುತ್ತ ಬರುತ್ತಿದೆ. ಈ ಶೋಷಣೆಯನ್ನು ಆಚರಣೆಯಲ್ಲಿ ಭಾಷೆಯ ಅನುರೂಪಣೆಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಬರುತಿದೆ. ಲಿಂಗತ್ವದ ಭಾಷೆಗಳ ಚಹರೆಯ ನೆಲೆಗಳು ವಾಸ್ತವ ಮತ್ತು ನಂಬಿಕೆಯಲ್ಲಿ ಹೇಗೆ ಬಳಕೆಯಲ್ಲಿವೆ ಎಂಬುದನ್ನು ವಿಶ್ಲೇಷಣಾತ್ಮಕ ವಿಧಾನದ ಮೂಲಕ ಚರ್ಚಿಸಲಾಗಿದೆ ಕನ್ನಡ ನುಡಿ ಬಳಕೆಯಲ್ಲಿ ಹೆಣ್ಣು ನಂಬಿಕೆ ಗಿಂತ ವಾಸ್ತವ ಎಷ್ಟು ದಿನ ಎಂಬುದನ್ನು ನಿರ್ದೇಶನ ಸಹಿತ ನಿರೂಪಿಸಿದ್ದಾರೆ ಇದರಿಂದ ಲಿಂಗಸೂಚಕ ಭಾಷೆಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ (ಪುಸ್ತಕದ ಆಯ್ದ ಭಾಗ)
©2024 Book Brahma Private Limited.