ಕನ್ನಡವೆ ಕಾಯಕ-ಕಾಯಕವೇ ಕೈಲಾಸ

Author : ಯ.ರು. ಪಾಟೀಲ

Pages 192

₹ 150.00




Year of Publication: 2015
Published by: ಕನ್ನಡ ಜಾಗೃತಿ ಪುಸ್ತಕ ಮಾಲೆ
Address: ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆ, ಸಿದ್ಧಸಂಸ್ಥಾನಮಠ, ಚಿಂಚಣಿ. ಬೆಳಗಾವಿ ಜಿಲ್ಲೆ

Synopsys

`ಕನ್ನಡವೆ ಕಾಯಕ-ಕಾಯಕವೇ ಕೈಲಾಸ’ ಕೃತಿಯು ಯ.ರು ಪಾಟೀಲ ಅವರ ಕನ್ನಡ ಸಂರಕ್ಷಣೆಯ ಕುರಿತ ಗಟ್ಟಿ ಮಾತುಗಳಾಗಿವೆ. ಈ ಕೃತಿಯು ಕನ್ನಡ ಜಾಗೃತಿ ಪುಸ್ತಕ ಮಾಲೆ-: 34 ಭಾಗವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ: ಕವಿರಾಜಮಾರ್ಗಕಾರನು ಕನ್ನಡದ ಜನರು ವಿವೇಕಿಗಳು, ಅಭಿಮಾನಿಗಳು ಆಗಿದ್ದರೆಂದು ಘಂಟಾಘೋಷವಾಗಿ ಸಾರಿದ್ದಾನೆ.  ಅದನ್ನು ನಾನು ಅತ್ಯುಕ್ತಿ ಎಂದೇನು ಭಾವಿಸಬೇಕಾಗಿಲ್ಲ; ವಸ್ತುಸ್ಥಿತಿ ಎಂದು ಪೂರ್ಣವಾಗಿ : ನಂಬಬೇಕಾಗಿಲ್ಲ. ಅದೊಂದು ಕವಿಮನದ ಆಶಾಪೂರ್ಣ ನಿರೀಕ್ಷೆಯಾಗಿದ್ದು, ನಾಡಜನ ಹಾಗಿರಬೇಕೆಂಬ ಕರೆ ಅಲ್ಲಿದೆ. ನನಗೆ ಶ್ರೀ ಯ. ರು. ಪಾಟೀಲರವರನ್ನು ಕಂಡಾಗಲೆಲ್ಲಾ ಕವಿರಾಜಮಾರ್ಗದ ಈ ಪದ್ಯ ನೆನಪಾಗಲು ಅನೇಕ ಕಾರಣಗಳಿವೆ. ಕನ್ನಡ ಸಾಹಿತ್ಯವನ್ನು ಅಧಿಕೃತವಾಗಿ ಅಧ್ಯಯನ ಮಾಡದ ಅವರು ಕನ್ನಡದಲ್ಲಿ ಗಮನಾರ್ಹ ಸಾಹಿತ್ಯ ಕೃಷಿ ನಡೆಸಿದ್ದಾರೆ. ಇತಿಹಾಸದ ವಿದ್ಯಾರ್ಥಿಯಲ್ಲದಿದ್ದರೂ ಕೋಟೆ, ಕೊತ್ತಲ, ರಾಜರು, ಆಡಳಿತ ಕುರಿತು ವಿಚಾರಪ್ರದವಾಗಿ ಬರೆದಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಯಾಗಿದ್ದುಕೊಂಡು ಕನ್ನಡ ಕಟ್ಟುವ ಕೆಲಸದಲ್ಲಿ ಕನ್ನಡ ತೇರನ್ನೆಳೆವ ಪುಣ್ಯ ಕರ್ಮದಲ್ಲಿ ಸದಾ ಉತ್ಸಾಹದಿಂದ ಮುನ್ನುಗ್ಗುತ್ತಾರೆ. ಇವರ 'ಸವದತ್ತಿ ಕೋಟೆ' ಪ್ರತಿಯನ್ನು ಓದಿದಾಗ ಅವರು ಇತಿಹಾಸವನ್ನು ಅಭಿಮಾನದಿಂದ ಎತ್ತಿ ಹೇಳುತ್ತಾರೆ ಎಂದೆನಿಸಿತ್ತು. ಆದರೆ ಅವರು ಅಷ್ಟಕ್ಕೇ ನಿಲ್ಲದೇ ಸವದತ್ತಿಯ ದೇಸಾಯರ ಹಾಳು ಸುರಿಯುತ್ತಿದ್ದ, ಅಲ್ಲಲ್ಲಿ ಭಗ್ನವಾಗುತ್ತಿದ್ದ ಕೋಟೆ ಕಂಡು ಸುಮ್ಮನಾಗಲಿಲ್ಲ. ಜನರಲ್ಲಿ, ಸರ್ಕಾರದಲ್ಲಿ ತಮ್ಮ ಬರಹ, ಭಾಷಣಗಳಿಂದ ಎಚ್ಚರ ಮೂಡಿಸಿ ಅದನ್ನು ರಕ್ಷಿಸಿ, ಪ್ರೇಕ್ಷಣಿಯ ಸ್ಮಾರಕವಾಗಿಸಿದ್ದಾರೆ. ಕನ್ನಡ ನಾಡಿನ ಪ್ರತಿ ಕೋಟೆ ಮುಂತಾದ ಸ್ಮಾರಕಗಳಿಗೆ ಹೀಗೆ ಕ್ರಿಯಾಶೀಲ ಬರಹಗಾರರು, ಸಂಶೋಧಕರು, ಅಧಿಕಾರಿಗಳು ದೊರೆತರೆ ಗತವು ಸುಸಂಗತವಾಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ತಮ್ಮದೇ ವಿಶಿಷ್ಟ ಚಿಂತನೆಗಳ ಕೆಲವು ಕೃತಿಗಳನ್ನು ಕನ್ನಡಿಗರಿಗೆ ನೀಡಿರುವ ಶ್ರೀ ಯ. ರು, ಪಾಟೀಲ ಈಗ 'ಕನ್ನಡವೆ ಕಾಯಕ-ಕಾಯಕವೇ ಕೈಲಾಸ' ಕೃತಿಯೊಂದಿಗೆ ಕನ್ನಡ ಜನಮನಕ್ಕೆ ಮುಖಾಮುಖಿಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ’ ಎಂದಿದೆ.

About the Author

ಯ.ರು. ಪಾಟೀಲ

ಲೇಖಕ ಯ.ರು.ಪಾಟೀಲ ಬೆಳಗಾವಿ ಜಿಲ್ಲಾ ಕಸಪ ಅಧ್ಯಕ್ಷರು.  ಕೃತಿಗಳು: ಕರುನಾಡ ಸಿಡಿಲು ಬೆಳವಡಿ ರಾಣಿ ಮಲ್ಲಮ್ಮ,  ...

READ MORE

Related Books