ಹಿಂದುಳಿದ ಪ್ರದೇಶ ಎಂತಲೇ ಹೆಸರಾಗಿರುವ ಹೈದರಾಬಾದ್ ಕರ್ನಾಟಕದ ಸಾಹಿತ್ಯ ಶ್ರೀಮಂತಿಕೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳನ್ನು ಬಸವರಾಜ ಕೋಡಗುಂಟಿ ಅವರು ಬರೆದಿದ್ದಾರೆ. ಈ ಸರಣಿಯಲ್ಲಿ ಊರು, ದರಗಾ, ಕೆರೆ, ಬಾವಿ, ಶಾಸನ, ಕೋಟೆ, ರಾಜಮನೆತನ, ಕನ್ನಡ, ಬುಡಕಟ್ಟು ಮೊದಲಾದವು. ವಿಶಿಷ್ಟವಾದ ಎಲ್ಲಮ್ಮ, ಅಲ್ಲಮಪ್ರಭು ಮೊದಲಾದ ಸಂಪುಟಗಳು ಇವೆ.
ಈ ಕೃತಿಯಲ್ಲಿ ಎರಡು ಭಾಗವಿದ್ದು, ಮೊದಲ ಭಾಗದಲ್ಲಿ ಬಸವರಾಜ ಕೊಡಗುಂಟಿಯವರ ಕನ್ನಡ ಎಂಬ ಲೇಖನ ಇದೆ. ಇಲ್ಲಿ ಈ ಭಾಗದ ಕನ್ನಡಗಳು, ಅವುಗಳ ಇತಿಹಾಸಿಕ ಬೆಳವಣಿಗೆ, ವೈವಿಧ್ಯತೆ ಮೊದಲಾದವನ್ನು ಚರ್ಚಿಸಿದೆ. ಎರಡನೆಯ ಭಾಗದಲ್ಲಿ ಏಳು ಲೇಖನಗಳು ಇವೆ. ಈ ಲೇಖನಗಳು ಹೈದರಾಬಾದ್ ಕರ್ನಾಟಕವನ್ನು ಪ್ರತಿನಿಧಿಸುವಂತಿದ್ದು ಭಿನ್ನ ಪ್ರದೇಶಗಳ ಕನ್ನಡಗಳ ಭಿನ್ನತೆಗಳನ್ನು ಪರಿಚಯ ಮಾಡಿಕೊಡುತ್ತವೆ.
©2024 Book Brahma Private Limited.