ಹಯ್ದರಾಬಾದ ಕರ್‍ನಾಟಕ ಭಾರತದಲ್ಲಿ ಹಲವಾರು ಕಾರಣಗಳಿಗೆ ಇತಿಹಾಸದ ಉದ್ದಕ್ಕೂ ಮಹತ್ವದ ಪ್ರದೇಶವಾಗಿದ್ದಿತು. ಬಾಶೆಯ ಕಾರಣಕ್ಕೂ ಈ ಬಾಗ ತುಂಬಾ ಆಸಕ್ತಿಕರ ಮತ್ತು ಅತ್ಯಂತ ಕುತೂಹಲಕರ. ಮರಾಟಿ ಹುಟ್ಟಿ ಬೆಳೆದ ನೆಲದ ಅಂಚು ಈ ಪರಿಸರ, ಉರ‌್ದು ಬಾಶೆ ಹುಟ್ಟಿದ್ದೆ ಇಲ್ಲ. ಮರಾಟಿ, ಉರ್ದು ಈ ಎರಡೂ ಕನ್ನಡದಿಂದಲೆ ಹುಟ್ಟುತ್ತವೆ. ಲಂಬಾಣಿ ಈ ಬಾಗದ ಮೂರನೆ ಅತಿ ದೊಡ್ಡ ಬಾಶೆ. ಬಾಂಗ್ಲಾ, ಕುಳು (ಕೊರವ) ಇವು ಕೂಡ ಈ ಬಾಗದ ಗಮನೀಯ ಬಾಶೆಗಳು. ಬೀದರಿನಲ್ಲಿ ಕನ್ನಡ ಮಾತಾಡುವವರು ೫೨% ಮಾತ್ರ ಇದ್ದರೆ ಕೊಪ್ಪಳದಲ್ಲಿ 83%. ಹೀಗೆ ಹಲವಾರು ಕುತೂಹಲಕರ ಅಂಶಗಳನ್ನು ಈ ಪುಸ್ತಕ ತೋರಿಸುತ್ತದೆ. ಈ ಬಾಗದ ಪ್ರತಿ ಜಿಲ್ಲೆಯಲ್ಲಿ ಯಾವ ಬಾಶೆ ಎಶ್ಟು ಮಂದಿ ಮಾತುಗರು ಮೊದಲಾದ ಸಾಕಶ್ಟು ಪ್ರಾತಮಿಕ ಮಾಹಿತಿಯನ್ನು ಇದು ಒದಗಿಸುತ್ತದೆ.
ಈ ಕೃತಿಯ ಪರಿವಿಡಿ ಮಾಹಿತಿ: ಪುಸ್ತಕ ಕಟ್ಟಣ, ಹರವು, ಹಯ್ದರಾಬಾದ ಕರ್‍ನಾಟಕ, ಕಟ್ಟಣ, ಹಯ್ದರಾಬಾದ ಗಳು: ಇತಿಹಾಸ, ಇತಿಹಾಸ, ಇತಿಹಾಸಿಕ ಅವಲೋಕನ, ಶಾಸನ ಬಾಶೆಗಳು, ಹಯ್ದರಾಬಾದ ಕರ್‍ನಾಟಕ ಬಾಶೆಗಳು: ವರ್‍ತಮಾನ, ಜಿಲ್ಲೆ: ಕಲಬುರಗಿ, ಕೊಪ್ಪಳ, ಬೀದರ, ಯಾದಗಿರಿ, ರಾಯಚೂರು, ಬಾಶೆ, ಕನ್ನಡ, ಊರ್‍ದು, ತೆಲುಗು, ಲಂಬಾಣಿ, ಮರಾಟಿ, ಹಿಂದಿ, ಬೆಂಗಾಲಿ, ಗುಜರಾತಿ, ತಮಿಳು, ಮಾರ್‍ವಾರಿ, ಕುಳು(ಕೊರವ), ಅಣುಬಂದದಲ್ಲಿ ಜನಗಣತಿ ದಾಕಲಿಸಿರುವ ಕರ್‍ನಾಟಕದ ಬಾಶೆಗಳು ಮತ್ತು ಮಾತುಗಾರರು.
©2024 Book Brahma Private Limited.