ಲಿಪಿಯ ಬೆಳವಣಿಗೆಗೆ ಮತ್ತು ವಿಕಸನದ ಕುರಿತು ವಿವರಣೆ ನೀಡುವ ‘ಕನ್ನಡ ಲಿಪಿಶಾಸ್ತ್ರ’ ಕೃತಿಯನ್ನು ಎಂ.ಜಿ. ಮಂಜುನಾಥ ಹಾಗೂ ಜಿ.ಕೆ.ದೇವರಾಜಸ್ವಾಮಿ ಅವರು ಸಂಪಾದಿಸಿದ್ದಾರೆ. ಈ ಕೃತಿಯು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಇದರಲ್ಲಿ ವರ್ಣಮಾಲೆ ಮತ್ತು ಕಾಗುಣಿತಗಳ ಲಿಪಿ ಬಹು ಮುಖ್ಯವಾದದ್ದು. ಕನ್ನಡಿಗರಿಗೆ ಇದೊಂದು ಬಹು ಪ್ರಯೋಜನವನ್ನು ನೀಡುವ ಕೃತಿಯಾಗಿದೆ.
©2024 Book Brahma Private Limited.