ವಿಮರ್ಶಕ ಜಿ.ಎಸ್. ಆಮೂರ ಹಾಗೂ ರಮಾಕಾಂತ ಜೋಶಿ ಅವರು ಸಂಪಾದಿತ ಕೃತಿ-ರಾಘವೇಂದ್ರ ಖಾಸನೀಸರ ಸಮಗ್ರ. ಖಾಸನೀಸರ 16 ಪ್ರಕಟಿತ ಕಥೆಗಳು ಮತ್ತು 7 ಅಪ್ರಕಟಿತ ಕಥೆಗಳು ಸೇರಿವೆ. ಕನ್ನಡದ ಕಥಾವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಕಥಾ ಶೈಲಿಯ ಮೂಲಕ ಛಾಪು ಮೂಡಿಸಿ, ಓದುಗರ ವರ್ಗವನ್ನು ಸೃಷ್ಟಿಸಿಕೊಂಡಿದ್ದ ರಾಘವೇಂದ್ರ ಖಾಸನೀಸರ ಹೆಸರು ಕನ್ನಡ ಕಥಾವಲಯದಲ್ಲಿ ಶಾಶ್ವತವಾಗಿರುತ್ತದೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.
©2024 Book Brahma Private Limited.