ಅಪೂರ್ಣ ವಲ್ಲ ಸುಧಾ ಎಂ ಕಥಾಸಂಕಲನವಾಗಿದೆ. ಕಥೆಗಳನ್ನು ಓದಿದ ನಂತರ ನನಗನ್ನಿಸಿದ್ದು, ಈ ಕಥೆಗಾರರಿಗೆ ಬದುಕಿನ ಕುರಿತು, ಸುತ್ತಲಿನ ಪರಿಸರದ ಕುರಿತು ಹೆಚ್ಚು ಭಾವನಾತ್ಮಕ ಒಳನೋಟವಿದೆ. ಹೀಗಾಗಿ ಪ್ರತೀ ಕಥೆಯ ಪಾತ್ರಗಳನ್ನು ಅವರು ಯಾಂತ್ರಿಕವಾದ ನೆಲೆಗಟ್ಟಿನಲ್ಲಿ ಕಟ್ಟದೆ, ಭಾವನೆಗಳೊಂದಿಗೆ ಹಾಗೂ ಒಂದು ನಮೂನೆಯ ತೀವ್ರ ಪ್ರೀತಿಯೊಂದಿಗೆ ಪರಸ್ಪರ ಬೆಸೆಯುತ್ತಾರೆ. ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ಕಥೆಗಳನ್ನು ಗ್ರಾಂಥಿಕ ಭಾಷೆಯಲ್ಲಿ ಹೇಳದೆ, ತಾವು ನಿತ್ಯ ಜೀವಿಸುವ, ಆಲೋಚಿಸುವ, ಕನಸು ಕಾಣುವ ತಮ್ಮದೇ ಸೊಗಡಿನಲ್ಲಿ ಬರೆದಿದ್ದಾರೆ; ಇದು ತುಂಬಾ ಮುಖ್ಯವಾದದ್ದು. ಇಲ್ಲಿ ಯಾವ ಕಥೆಗಳೂ ಅಪೂರ್ಣವಲ್ಲ.. ಬದಲಾಗಿ ಪರಿಪೂರ್ಣತೆಯ ಕಡೆಗಿನ ಹೆಜ್ಜೆಗಳು. ಲೇಖನಿ ಇನ್ನಷ್ಟು ಸವೆಯಲಿ. ಸವೆತವು ಮತ್ತಷ್ಟು ಹೊಸ ಕತೆಗಳಿಗೆ ದಾರಿಯಾಗಲಿ. ಸುಧಾ ಅವರಿಗೆ ಶ್ರೇಯಸ್ಸಾಗಲಿ ಎಂದು ಕಾರ್ತಿಕಾದಿತ್ಯ ಬೆಳ್ಗೋಡು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.