‘ಕುಲಕರ್ಣಿಯವರ ಆಯ್ದ ಕಥೆಗಳು’ ಹಿರಿಯ ಕಥೆಗಾರರಾದ ಮಾಧವ ಕುಲಕರ್ಣಿಯವರ ಆಯ್ದ ಕಥೆಗಳು ಇಲ್ಲಿವೆ. ಮೇಲ್ನೋಟಕ್ಕೆ ಕಥೆಯೊಂದನ್ನು ನಿರೂಪಿಸುತ್ತಿದ್ದಾರೆಂದು ತೋರಿದರೂ ಅವರ ಕಥೆಗಳು ಜೀವನದ ಅನೂಹ್ಯ ಸತ್ಯಗಳನ್ನು ತೆರೆದು ತೋರಿಸುತ್ತವೆ. ಈ ಕಥೆಗಳನ್ನು ಸದ್ಯ ಪ್ರಚಲಿತವಿರುವ ಯಾವುದೇ ಮಾರ್ಗಕ್ಕೆ ಅನ್ವಯಿಸಿ ವಿವರಿಸಲು ಬಾರದು. ಆದರೆ ಅಪಾರ ಓದುಗರ ಗಮನವನ್ನು ಸೆಳೆದಿರುವ ಕುಲಕರ್ಣಿಯವರ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟನಾಗುವುದ ಮೂಲಕವೇ ಜನಪ್ರಿಯವಾಗಿವೆ. ಆದರೆ ಜನಪ್ರಿಯತೆಗೆಂದು ಅವರು ಕಥೆಗಳನ್ನು ಬರೆದಿಲ್ಲ. ಇಲ್ಲಿಯ ಕಥೆಗಳು ಅವರ ಅಪಾರ ಜೀವನಾನುಭವನ್ನು ಎತ್ತಿ ತೋರಿಸುತ್ತವೆ. ಅವರ ಅನೇಕ ಕಥಾ ಓದುಗರಿಗೆ ಅವರೊಬ್ಬ ಕನ್ನಡದ ಪ್ರಮುಖ ವಿಮರ್ಶಕರೆಂಬುದು ಕೂಡ ಗೊತ್ತಿಲ್ಲ. ಹೀಗೆ ಸಾಹಿತ್ಯದ ಎರಡು ರಂಗಗಳಲ್ಲಿ ಪ್ರಗತಿ ಸಾಧಿಸಿ ಎರಡು ಭಿನ್ನ ರೀತಿಯ ಓದುಗರ ಬೆಂಬಲವನ್ನು ಪಡೆದಿರುವ ಲೇಖಕರದಲ್ಲಿ ಈಗ ಕನ್ನಡ ಸಾಹಿತ್ಯದಲ್ಲಿ ಮಾಧವ ಕುಲಕರ್ಣಿಯವರೊಬ್ಬರೇ ಇರಬಹುದು ಎನ್ನುತ್ತಾರೆ ಪ್ರಕಾಶಕರು. ಹಾಗೇ ಯಾವುದೇ ಪಂಥಕ್ಕೂ ಸೇರದೇ ತಮ್ಮ ಆಸಕ್ತಿಯನ್ನು ಉದ್ದೀಪನಗೊಳಿಸುತ್ತಲೇ ಹೋಗಿರುವುದರಿಂದ ಇದು ಅವರಿಗೆ ಸಾಧಿಸಿದೆ. ಇಲ್ಲಿಯ ಕಥೆಗಳು ಅವರಲ್ಲಿಯ ಈ ಅಂಶಗಳನ್ನು ತೋರಿಸುತ್ತವೆ. ಸಾಮಾನ್ಯರ ಜನಜೀವನವನ್ನು ಸೆರೆ ಹಿಡಿಯುತ್ತಲೇ ಉನ್ನತವಾದುದ್ದನ್ನು ಇಲ್ಲಿಯ ಕಥೆಗಳು ಸೆರೆ ಹಿಡಿಯುತ್ತವೆ.
©2024 Book Brahma Private Limited.