'ಕಾಪ್ಟನೆಯ ಕಾಲುದಾರಿ" ಯನ್ನು ಪ್ರೋತ್ಸಾಹಿಸಿದ ಓದುಗ ಬಳಗದ ಮುಂದೆ ಹದಿನೆಂಟು ಕಥೆಗಳನ್ನೊಳಗೊಂಡ "ಸರ್ವಂತೆ ಕ್ರಾಸ್" ಎನ್ನುವ ಕಥಾ ಸಂಕಲನವನ್ನು ತರಲು ಲೇಖಕರು ಮುಂದಾಗಿದ್ದಾರೆ. ಹಿಂದೊಮ್ಮೆ ಅವರನ್ನು ನಾನು ಕೇಳಿದ್ದ 'ಮಲೆನಾಡನ್ನು ಬಿಟ್ಟು ನಿಮ್ಮ ಬರಹ ಇರಲಾರದು ಅನಿಸುತ್ತೆ ಅಲ್ವಾ ಅಂತಾ. ಅದಕ್ಕೆ ಅವರು ಹೇಳಿದ್ದು ಮಲೆನಾಡನ್ನು ಬಿಟ್ಟು ಬರಹ ಮಾತ್ರವಲ್ಲ, ಬದುಕು ಕೂಡ ಇಲ್ಲ". ಹಾಗೆಯೇ ಕಥಾ ಸಂಕಲನದಲ್ಲಿ ಬರುವ 'ಮಧ್ಯರಾತ್ರಿಯ ಮಾತು' 'ಸಿರ್ವಂತೆ ಕ್ರಾಸ್ ನಂತಹ ಕಥೆಗಳು ಮಲೆನಾಡಿನ ಬೆಟ್ಟ-ಗುಡ್ಡಗಳನ್ನು ಹತ್ತಿಳಿದು, ಅಂಕು ಡೊಂಕಾದ ಮಣ್ಣು ರಸ್ತೆಗಳಲ್ಲಿ ಸಂಚರಿಸಿದರೆ, 'ಸ್ಮಾರ್ಟ್ ಜಗತ್ತು' 'ಕನ್ನಡದ ಕಂದ' ಮುಂತಾದ ಕಥೆಗಳು ಬೆಂಗಳೂರಿನ ಕಾಂಕ್ರೀಟ್ ಬೀದಿಯಲ್ಲಿ ನುಸುಳುತ್ತವ. ಕುಮಟಾದ ಹಳೇ ಬಸ್ ನಿಲ್ದಾಣ' ಹಾಗೂ 'ಕಡಲ ಮುತ್ತು' ಕಥೆಗಳು ಕರಾವಳಿಯ ಬದುಕನ್ನು ಪರಿಚಯಿಸುವ ಪ್ರಯತ್ನ ಮಾಡಿದರೆ ಇನ್ನುಳಿದ ಕಥೆಗಳು ಮಾನವ ಸಹಜವಾದ ಆಸ ಆತಿ ಆಸ ಪ್ರೀತಿ-ಪ್ರಣಯ, ಜೀವನ-ಜಂಜಾಟ, ಎಡವು-ತೊಡರುಗಳ ಮೇಲೆ ಹಡೆದುಕೊಳ್ಳುತ್ತವ. ವಿಶಿಷ್ಟ ಶೈಲಿಯ ಈ ಎಲ್ಲಾ ಕಥೆಗಳು ಓದುಗರನ್ನು ರಂಜಿಸುವಲ್ಲಿ ಯಶಸ್ವಿಯಾಗುತ್ತವೆ ಎನ್ನುವುದು 'ಕಥೆಗಳ ಆಯ್ಕೆಯಲ್ಲಿ ಪಾಲುದಾರಳಾದ ನನ್ನ ನಂಬಿಕೆ.
©2024 Book Brahma Private Limited.