ಮಾತೃದೇವೋಭವ ಎನ್ನುವ ಮಾತಿನಂತೆ ತಾಯಿಯ ಸ್ಥಾನ ಯಾವಾಗಲೂ ಹಿರಿದು. ಅದಕ್ಕೆ ಅವಮಾನ ಮಾಡಿದವರಿಗೆ ಅನಾಹುತ ತಪ್ಪಿದ್ದಲ್ಲ. ಆಕೆ ನಡುಮನೆಯ ಖಂಬದಂತೆ ಇಡೀ ಮನೆಯನ್ನು..ಕುಟುಂಬವನ್ನು ಗಟ್ಟಿಯಾಗಿ ಹಿಡಿದು ಆಧಾರ ಸ್ತಂಭವಾಗಿ ನಿಂತಿರುತ್ತಾಳೆ. ಬಾಹ್ಯರೂಪಕ್ಕಿಂತ ಅಂತರಂಗದ ನಿಷ್ಕಲ್ಮಷತೆ ಹೆಚ್ಚಾಗಿದ್ದರೆ ಮಾತ್ರ ಒಬ್ಬ ಸ್ತ್ರೀ ನಿಜವಾದ ರೂಪದರ್ಶಿಯಾಗುತ್ತಾಳೆ. ನಮ್ಮ ಸಂಸ್ಕೃತಿ ಕೆಲವೊಮ್ಮೆ ನಮಗಿಂತ ವಿದೇಶೀಯರಿಗೆ ಹೆಚ್ಚು ಅರ್ಥವಾಗಿ ಆರಾಧನೆಯ ದ್ಯೋತಕ ವಾಗುತ್ತದೆ. ದಂಡಪಿಂಡಗಳೆನ್ನಿಸಿಕೊಂಡವರಿಗೂ ಬದುಕು ಒಮ್ಮೊಮ್ಮೆ ಪರಿಶ್ರಮದ ಮೂಸೆಯಲ್ಲಿ ಕರಗಿಸುತ್ತ ಗುರಿ ತಲುಪಿಸಿ ಯಶಸ್ವಿ ಯಾಗಿಸುತ್ತದೆ. ನಿರಂತರ ಚಲನೆಯುಳ್ಳ ಜೀವನ. ಸಾಧಿಸುವ ಛಲವಿದ್ದವರನ್ನು ಸಪ್ತಸಾಗರದಾಚೆಯೂ ಬೆಳೆಸಿ ಮುತ್ತಾದವಳು ಎನಿಸಿ ಶಾಂತವಾಗುತ್ತದೆ ಎನ್ನುತ್ತಾರೆ ಲೇಖಕಿ ಮಧುರಾ ಕರ್ಣಮ್ ತಮ್ಮ ಕೃತಿಯಲ್ಲಿ.
©2025 Book Brahma Private Limited.