‘ಬೆಸಗರಹಳ್ಳಿ ರಾಮಣ್ಣ: ಸಮಗ್ರ ಕಥೆಗಳು’ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯಲ್ಲಿ ನೆಲದ ಒಡಲು-(1967) ಸಂಕಲನದ ಹಾವಿಲ್ಲದ ಹುತ್ತ, ಸೋಲು, ಮಳೆಗರೆಯಿತು ಬಾನು ಹಸುರಾಯಿತು ಮನ, ಸುಗ್ಗಿ, ಮಹಾನವಮಿ, ನಂಜಿನ ಕೊನೆ, ದೇವರ ಹೂವು, ಹಾಗೂ ಗರ್ಜನೆ(1972) ಸಂಕಲನದ ಜೀತ, ಅವ್ವ, ಜ್ವಾಲೆಯ ನಡುವೆ, ಕಳೆ, ಅಭಿಮಾನ, ಸ್ವಾರ್ಥ, ನೆಲದ ಉಸಿರು, ಕೆಂಪು ಹುಂಜ, ಗರ್ಜನೆ ಕತೆಗಳು ಸಂಕಲನಗೊಂಡಿವೆ. ಹಾಗೇ ನೆಲದ ಸಿರಿ(1974) ಸಂಕಲನದ ಕರೆ, ಕಣಿವೆಯ ಅಂಚು ಕತೆಗಳು ಹರಕೆಯ ಹಣ (1976) ಸಂಕಲನದ ಹರಕೆಯ ಹಣ, ಗಾಂಧೀ ಸಂತಾನ, ಕಕರನ ಯುಗಾದಿ, ನೆರಳುಗಳು, ಬಾನಿಗೆ ಬಿದ್ದದ್ದು ದೆವ್ವ ಕತೆಗಳು ಸಂಕಲನಗೊಂಡಿವೆ. ಹಾಗೇ ಒಂದು ಹುಡುಗನಿಗೆ ಬಿದ್ದ ಕನಸು(1979) ಸಂಕಲನದ ಶೂಲ, ಒಂದು ಹುಡುಗನಿಗೆ ಬಿದ್ದ ಕನಸು, ಗಾಂಧಿ, ಸಂತೆಯ ಒಳಗೊಂದು ಮನೆಯ ಮಾಡಿ, ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು, ಬೇಲ, ಚಲುವನ ಪರಂಗಿ ಗಿಡಗಳು ಕತೆಗಳು ಹಾಗೇ ತೋಳಗಳ ನಡುವೆ ಕಿರುಕಾದಂಬರಿಯೂ ಸಂಕಲನಗೊಂಡಿದೆ. ಹಾಗೇ ಕೊಳಲು ಮತ್ತು ಖಡ್ಗ- (1998) ಸಂಕಲನದ ಬೆಟ್ಟದ ಮೇಲೊಂದು ಮನೆಯ ಮಾಡಿ, ಕ್ಷಯ, ತಾಯಿ, ಕರುಣಾಳು ಬಾ ಬೆಳಕೆ, ಗಂಗಾ, ಗೋಸುಂಬೆ, ಮಾನಭಂಗ, ಧರ್ಮ, ಕುಂಡ್ಯವೆಂಬೀ ನಾಡಿನಲ್ಲಿ, ಇದು ಕತೆಯಲ್ಲ, ಹಾದರ, ಕರೀಹಸ, ನೂರು ರೂಪಾಯಿ ನೋಟು, ಆಳುಮಗ, ಜಾಡಮಾಲಿ, ಹತ್ಯೆ, ಮಗಳು, ಅಪ್ಪ ಕತೆಗಳು ಸಂಕಲನಗೊಂಡಿವೆ.
©2025 Book Brahma Private Limited.