ಕೆರೂರು ವಾಸುದೇವಾಚಾರ್ಯ ಸಮಗ್ರ ಸಂಪುಟ-3

Author : ಜಿ.ಎಂ. ಹೆಗಡೆ

Pages 584

₹ 1000.00




Year of Publication: 2007
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.

Synopsys

`ಕೆರೂರು ವಾಸುದೇವಾಚಾರ್ಯ ಸಮಗ್ರ ಸಂಪುಟ-3’ ಕೃತಿಯು ಎಂ.ಎಂ ಕಲಬುರ್ಗಿಯವರು ಪ್ರಧಾನವಾಗಿ ಸಂಪಾದಿಸಿದ ಸಣ್ಣ ಕಥಾ ಸಂಪುಟ ಕೃತಿಯಾಗಿದೆ. ಕೃತಿಯನ್ನು ಶ್ಯಾಮಸುಂದರ ಬಿದರಕುಂದಿ, ರಮಾಕಾಂತ ಜೋಶಿ ಹಾಗೂ ಜಿ.ಎಂ ಹೆಗಡೆ ಅವರು ಸಂಪಾದಿಸಿದ್ದಾರೆ. ಕಥಾ ಸಂಪುಟವನ್ನು ಮೂರು ಸಂಪುಟವಾಗಿ ವಿಭಾಗಿಸಿದ್ದು ಸಂಪುಟ 1 ರಲ್ಲಿ ನಲದಮಯಂತಿ, ವಸಂತ ಯಾಮಿನೀ ಸ್ವಪ್ನ ಶ್ರೇ಼ಷ್ಠಿ, ಪತಿವಶೀಕರಣ, ರುಕ್ಮಿಣೀ ಹರಣ, ಪುರಂದರ ದಾಸ ನಾಟಕ, ರಮೇಶ ಲಲಿತಾ (ಅಪೂರ್ಣಗಳನ್ನು ಒಳಗೊಂಡಿದೆ). ಸಂಪುಟ-2 ಕಾದಂಬರಿ ಸಂಪುಟದಲ್ಲಿ ಇಂದಿರಾ, ಯದುಮಹಾರಾಜ, ಭ್ರಾತೃಘಾತಕನಾದ ಔರಂಗಜೇಬ, ಯವನ ಸೈರಂಧ್ರೀ, ವಾಲ್ಮೀಕಿ ವಿಜಯವನ್ನು ಒಳಗೊಂಡಿದೆ. ಸಂಪುಟ-3ರಲ್ಲಿ ಸಣ್ಣ ಕಥಾಸಂಪುಟ ವಿಭಾಗದಲ್ಲಿ ಪ್ರೇಮ ವಿಜಯ, ತೊಳೆದ ಮುತ್ತು, ಬೆಳಗಿದ ದೀಪಗಳನ್ನು ಒಳಗೊಂಡಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಜಿ. ಬಿ. ಜೋಶಿಯವರ ಬಾಗಲಕೋಟೆಯ ಸಂಬಂಧ ಬಹಳ ಹಳೆಯದು; ಅವರ ಶಾಲಾ ದಿನಗಳಿಂದಲೂ ಇದ್ದದ್ದು. ಒಮ್ಮೆ ಬಾಗಲಕೋಟೆಯ ಸ್ನೇಹಿತರೆಲ್ಲರೂ ಸೇರಿ ಕೆರೂರ ವಾಸುದೇವಾಚಾರ್ಯರ ಆತ್ಮವನ್ನು 'ಪ್ಲಾಂಚೆಟ್'ನಲ್ಲಿ ಆಹ್ವಾನಿಸಿ, ಅವರ ಜೀವನದ ಕೊನೆಯ ಆಸೆಯೇನಿತ್ತು ? ಎಂಬುದನ್ನು ತಿಳಿಯಬಯಸಿದರು. ತಮ್ಮ 'ನಲದಮಯಂತಿ' ನಾಟಕವನ್ನು ರಂಗದ ಮೇಲೆ ಪ್ರಯೋಗಿಸಲಿಕ್ಕೆ ಆಗದೆ ತೀರಿಕೊಂಡ ಅತೃಪ್ತಿಯನ್ನು ಅವರ ಆತ್ಮ ವ್ಯಕ್ತಪಡಿಸಿತು. ಆಗ ಜಿ. ಬಿ. ಜೋಶಿಯವರು ತಿಂಗಳು ಗಟ್ಟಲೆ ಬಾಗಲಕೋಟೆಯ ಪರ್ವತಿಯವರ ಮನೆಯಲ್ಲಿ ನಾಟಕದ ರಿಹರ್ಸಲ್ ಮಾಡಿಸಿ ಬಾಗಲಕೋಟೆಯಲ್ಲಿ “ನಲದಮಯಂತಿ'ಯನ್ನು ಪ್ರದರ್ಶಿಸಿಯೇ ಬಿಟ್ಟರು. ಈ ನಾಟಕದಲ್ಲಿ ನಟರಾಗಿದ್ದುದಲ್ಲದೇ, ಸಂಗೀತ ಸಂಯೋಜನೆ ಮಾಡಿದವರು ಪಂಡಿತ ಭೀಮಸೇನ ಜೋಶಿ. ಆಗಿನದು 'ಸಮಗ್ರ ಸಂಗೀತ ನಾಟಕ'ಗಳ ಕಾಲ. ಈ ನಾಟಕದಲ್ಲಿ 40 ಹಾಡುಗಳಿದ್ದವು. ಬಹುತೇಕ ಎಲ್ಲ ನಟರಿಗೂ ಒಂದಾದರೂ ಹಾಡು ಇತ್ತು. ಬಾಗಲಕೋಟೆಯ ಜನರಿಗೆ ಒಂದು ಅಭೂತಪೂರ್ವ ಅನುಭವ ಇದಾಗಿದೆ ಎಂದು ವಿಶ್ಲೇಷಿಸಿದ್ದಾರೆ.

About the Author

ಜಿ.ಎಂ. ಹೆಗಡೆ
(12 December 1952)

ವಿಮರ್ಶಕ ಜಿ.ಎಂ. ಹೆಗಡೆ ಅವರು  ಧಾರವಾಡದ ಕಿಟೆಲ್‌ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸದ್ಯ ನಿವೃತ್ತರು. ಧಾರವಾಡದಲ್ಲಿ ನೆಲೆಸಿದ್ದಾರೆ. ’ಮಾಸ್ತಿಯವರ ವಿಮರ್ಶೆ: ಒಂದು ಅಧ್ಯಯನ’ ಇವರ ಪಿಎಚ್ ಡಿ ಮಹಾಪ್ರಬಂಧ.  ಕೃತಿಗಳು:  ಸಾಹಿತ್ಯ ಸಹೃದಯತೆ, ಪುಸ್ತಕಲೋಕ, ಸಾಹಿತ್ಯ ಮತ್ತು ಸಂಸ್ಕೃತಿ ಸ್ಪಂದನ, ಕವಿ ಕಣವಿ, ಕಿಟೆಲ್ ಜೀವನ ಹಾಗು ಕೃತಿ ಸಮೀಕ್ಷೆ.    ...

READ MORE

Related Books