ಜಗ್ಗುನಕ ಎಂಬುದು ಲೇಖಕ ಸ. ರಘುನಾಥ ಅವರ ಸಮಗ್ರ ಮಕ್ಕಳ ಕಥೆ-ಕವನಗಳ ಸಂಕಲನ. ಸ. ರಘುನಾಥ ಸಮಗ್ರ ಸಾಹಿತ್ಯ ಸಂಪುಟ-3ರ ಭಾಗವಾಗಿ ಈ ಕೃತಿ ಪ್ರಕಟಗೊಂಡಿದೆ. ಭಾಗ-1 ರಲ್ಲಿ ಮಕ್ಕಳ 15 ಕಥೆಗಳು, ಭಾಗ-2 ರಲ್ಲಿ ಪದ್ಯಗಳು, ಭಾಗ-3ರಲ್ಲಿ ಪುಟ್ಟಪುಟ್ಟ ಪದ್ಯಗಳು, ಭಾಗ-4ರಲ್ಲಿ ಪಾಠದ ಪದ್ಯಗಳು ಹಾಗೂ ಭಾಗ-5 ರಲ್ಲಿ ಮಕ್ಕಳ ತೆಲುಗು ಜಾಪದ ಪದ್ಯಗಳು -ಹೀಗೆ ಕವಿತೆ-ಕಥೆಗಳನ್ನು ಸಂಕಲಿಸಲಾಗಿದೆ.
ಸಾಹಿತಿ ಚ.ಹ. ರಘುನಾಥ ಅವರು ಕೃತಿಗೆ ಮುನ್ನುಡಿ ಬರೆದು ‘ರಘುನಾಥರ ಕಥೆಗಳು ಗ್ರಾಮೀಣ ಬದುಕಿನ ಸಹಜ ಚೆಲುವು, ಸಹಜ ಮಾನವೀಯ ಸಂಬಂಧಗಳಲ್ಲಿನ ಆರ್ದ್ರತೆಯನ್ನು ಕಾಣಿಸಲು ಹಂಬಲಿಸುವ ವಿಶಿಷ್ಟ ಪ್ರಯತ್ನಗಳು. ಬಹುತೇಕ ಕಥೆಗಳಲ್ಲಿ ತಿನಿಸುಗಳು, ಊಟದ ಪ್ರಸಂಗಗಳು ಸುಳಿದು ಹೋಗುತ್ತವೆ. ಈ ಪ್ರಸಂಗಗಳು ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾದ ಸಂಬಂಧ-ಕಾಳಜಿಯನ್ನು ಸೂಚಿಸುವಂತಿವೆ. ಮನುಷ್ಯ ಸಂಬಂಧಗಳ ಅನನ್ಯತೆಯನ್ನು ಕಟ್ಟಿಕೊಡುತ್ತವೆ. ಇಲ್ಲಿಯ ಕವಿತೆಗಳ ಆಶಯವೂ ಮಾನವೀಯ ಪ್ರಪಂಚದ ಅಂಚುಗಳನ್ನು ವಿಸ್ತರಿಸುವುದೇ ಆಗಿದೆ. ಮಕ್ಕಳ ಮನಸ್ಸು ಮುದಗೊಳಿಸುವ ಪದ್ಯಗಳಿವೆ.ಇವು ಮಗುತನವನ್ನು ಉದ್ದೀಪಿಸಬಲ್ಲವು’ ಎಂದು ಶ್ಲಾಘಿಸಿದ್ದಾರೆ.
©2024 Book Brahma Private Limited.