ದೊರೇಶ್ ಅವರು ತಮ್ಮ ಚೊಚ್ಚಲ ಕಥಾ ಸಂಕಲನದ ಒಂಬತ್ತು ಕಥೆಗಳ ಮೂಲಕ ‘ಕಥೆಗಾರ ದೊರೇಶ’ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಬದುಕನ್ನು ಕುರಿತು, ಸಮಾಜದ ಚಲನೆಯು ಆಯತಪ್ಪುತ್ತಿರುವುದರ ಕುರಿತು ಸದಾ ತುಡಿಯುವ, ಒಳ್ಳೆಯದನ್ನೇ ಆಶಿಸುವ ಅವರ ಮಾನಸಿಕ ಅಭಿವ್ಯಕ್ತಿ ಇಲ್ಲಿ ಧ್ವನಿಪಡೆದಿದೆ. ಒಂದು ಯುವ ತಲೆಮಾರಿನಲ್ಲಿ ಇರಬೇಕಾದ ತುಡಿತಗಳು ಇವುಗಳೇ ಆಗಿವೆ. ದೊರೇಶ್‌ರವರು ಸಂಬಳ ಎಣಿಸುವ ಕೈ, ಜೊತೆಗೆ ತನ್ನ ಬೇರುಗಳಿರುವ ಗ್ರಾಮ, ಅಲ್ಲಿನ ಕೃಷಿ, ಮಹಿಳೆ, ಭೂಮಿಯ ಸಂಕಟಗಳನ್ನೂ ಆಲಿಸುವ ಕಿವಿಗಳೂ, ಯೋಚಿಸುವ ಮನಸ್ಸನ್ನು ಹೊಂದಿರುವುದರಿAದಲೇ ಇಂಥ ಕತೆಗಳು ಹುಟ್ಟಲು ಸಾಧ್ಯ. ಭೀಮಿ, ರುಕ್ಮಿಣಿ, ಕೆಂಪಮ್ಮನಂತಹ ಮಾದರಿ ಮಹಿಳೆಯರನ್ನು ಸೃಜಿಸಲು ಸಾಧ್ಯ. ಕೋಣ ಕೊಡುವ ವೃತ್ತಿಯನ್ನು ಭೀಮಿಯಂತಹ ಮನೆಯ ಹಿರಿಯ ಮಗಳು ನಿರ್ವಹಿಸುವ ಮತ್ತು ತನ್ನ ಅವಲಂಬಿತ ಅನಾಥ ತಂಗಿಯರ ಬದುಕನ್ನು, ಜೊತೆಗೆ ತನ್ನ ಬದುಕನ್ನು ನೇರೂಪ ಮಾಡಿಕೊಳ್ಳುವುದೇ ಮಹತ್ವದ ಸಂದೇಶ.
©2025 Book Brahma Private Limited.