ಪ್ರಾಂಜಲ ಕವಿತಾ ಮುಚ್ಚಂಡಿ ಅವರ ಕಥಾಸಂಕಲನವಾಗಿದೆ. ಹೀಗೆ ಈ ಕೃತಿಯಲ್ಲಿ ಹ್ಯಾಪಿ ದೀಪಾವಳಿ ,ಬೆಡ್ ನಂಬರ್ 20 ಎಂಬಂತಹ ನ್ಯಾನೋ ಕಥೆಗಳಿವೆ. ತಾವು ವಕೀಲೆಯಾಗಿರುವುದರಿಂದ ಕಾನೂನಿನ ಚೌಕಟ್ಟಿನಲ್ಲಿ ಬರುವಂತಹ 'ಮಾನವೀಯತೆ' ಹಾಗೂ 'ಯುಗಾದಿಯ ಉಡುಗೊರೆ 'ಎಂಬ ಎರಡು ಕಥೆಗಳ ಜೊತೆಗೆ, ಹಿರಿಯ ನಾಗರೀಕರು ಮೊಬೈಲ್ ಮೂಲಕ ಹೇಗೆಲ್ಲಾ ಮೋಸಕ್ಕೆ ಒಳಗಾಗುತ್ತಾರೆ ಎಂಬುದನ್ನು ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ 'ಹಿರಿಯ ನಾಗರಿಕರು' ಮತ್ತು 'ಹದಿ ಹರೆಯದವರ ಸಮಸ್ಯೆ 'ಎಂಬ ಮೊಬೈಲ್ ಗಳಿಂದಾಗುತ್ತಿರುವ ಸೈಬರ್ ಅಪರಾಧಗಳನ್ನು ತಿಳಿಸುವ ಕಥೆಗಳಿದ್ದು ಲೇಖಕಿಯವರು ಸಾರ್ವಜನಿಕರಲ್ಲಿ ಜಾಗೃತಿಯನ್ನು, ಕಾನೂನಿನ ಅರಿವನ್ನು ಮತ್ತು ಸಮಾಜಕ್ಕೊಂದು ಅರ್ಥಪೂರ್ಣ ಸಂದೇಶಗಳನ್ನು ನೀಡುವ ಉದ್ದೇಶದಿಂದ ಈ ಸುಂದರ ಕಥೆಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.