ಲೇಖಕಿ ಪ್ರಿಯಾ ಭಟ್ ಕಲ್ಲಭೆ ಅವರ ಕಥಾಸಂಕಲನ ಕೃತಿ ʻನಾನೊಂದು ಹುಚ್ಚು ಹೊಳೆʼ. ಗಂಗಾವಳಿ ನದಿ ದಡದ ಕಲ್ಲೇಶ್ವರದಲ್ಲಿ ಬಾಲ್ಯ ಕಳೆದು ಮುಂದೆ ಅಘನಾಶಿನಿ ನದಿ ತಟದಲ್ಲಿರುವ ಕಲ್ಲಬ್ಬೆಗೆ ವಿವಾಹಿತರಾಗಿ ಹೋದ ಲೇಖಕಿ ಈ ಎರಡೂ ನದಿತಟಗಳ ಹಾಗೂ ಬೆಟ್ಟ ಗುಡ್ಡಗಳ ನಡುವಿನ ತಮ್ಮ ಜೀವನದ ಅನುಭವಗಳನ್ನು ಕಥಾಗುಚ್ಚದಲ್ಲಿ ಬಿಚ್ಚಿಟ್ಟಿದ್ದಾರೆ. ಇಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ಅವು ಕುಮಟಾದ ಸುತ್ತಮುತ್ತಲಿನ ಪ್ರದೇಶಗಳನ್ನು ಆವರಿಸಿದ್ದು, ಗ್ರಾಮಜೀವನದಲ್ಲಿ ಬಳಸುವ ಭಾಷೆಯ ಮೂಲಕ ಕತೆಗಳನ್ನು ಹೇಳುತ್ತಾ ಹೋಗುತ್ತಾರೆ. ಪುಸ್ತಕದ ಪರಿವಿಡಿಯಲ್ಲಿ ಸರ್ಕಸ್ಸಿನ ಹುಡುಗಿ, ನಾನೊಂದು ಹುಚ್ಚು ಹೊಳೆ, ನೀರು ತೋಟದ ಹಸಿರುಮನೆ, ಚಾರುಲತೆ ಹಾಗೂ ಕನ್ನಡಿ, ಬೆಳಕನರಸಿ, ಮಳೆಗಾಲದ ಬೆಳದಿಂಗಳು, ನಶೆ, ವ್ಯಸ್ತ ಮುಂತಾದ ಶೀರ್ಷಿಕೆಗಳ ಕತೆಗಳಿವೆ.
©2025 Book Brahma Private Limited.