ಪ್ರೀತಿಭರತ್ ಅವರಿಗೂ ಕಥೆಗಳಿಗೂ ಬಲುನಂಟು, ಈಗಾಗಲೇ ಪ್ರೀತಿಭರತ್ ಅವರ ಸಂಜೆ ಮಲ್ಲಿಗೆ (ಕಥಾಸಂಕಲನ) 2015, ಹಾಗೂ ಪ್ರೇಮ ಪಾರಿಜಾತ (ಕಥಾಸಂಕಲನ) 2020ರಲ್ಲಿ ಪ್ರಕಟವಾಗಿದೆ. ಪ್ರಸ್ತುತ ಇದು ಕೂಡ ಕಥಾಸಂಕಲನ ವಾಗಿದೆ. ಹೂವಿನ ಹುಡುಗಿ ವಸಂತ, ನಮಿತ ಅವರುಗಳ ಪ್ರೇಮಪ್ರಕರಣ, ಅನೈತಿಕ ಪ್ರೇಮಪ್ರಕರಣಗಳಿಂದಾಗುವ ದುಷ್ಪರಿಣಾಮವನ್ನು ಈ ಕಥೆ ಹೇಳುತ್ತದೆ. ವಸಂತನಿಗೆ ನಮಿತಾಳ ಮೇಲೆ ಆಕರ್ಷಣೆ, ಮೋಹ, ವ್ಯಾಮೋಹ, ಅನೈತಿಕ ಸಂಬಂಧ ಅನರ್ಥಕ್ಕೆ ದಾರಿ ಎಂದು ತಿಳಿಸುವ ಕಥೆ ಇದಾಗಿದೆ. ಕವಿಯ ಅಳಲು : ಮಂಗೇಶಿಗೆ ಕನ್ನಡದ ಬಗ್ಗೆ ಆಸಕ್ತಿ. ಆದರೆ ಅವನ ಹೆಂಡತಿ ಮಲ್ಲಿಗೆ ಬಂಗಾರದ ತಾಳಸರ, ಕಾಲುಂಗುರದ ಮೇಲೆ ಆಸೆ. ಕೊಡಿಸಿದ ಆಮೇಲೆ ಮಲ್ಲಿ ಸುಮ್ಮನಾದಳು. ಇಲ್ಲಿ ಕವಿ ಮದುವೆಯ ನಂತರ ಆದ ಅನುಭವ ಹೇಳಿಕೊಂಡಿದ್ದಾನೆ. ನೀಲಿಕಣ್ಣಿನ ಹುಡುಗಿ : ಪ್ರೇಮ ಕಥೆ, ತೇಜು ಮಂದಾರಳನ್ನು ಮದುವೆಯಾಗಿ ಕ್ಲೀಪ್‌ವೆಲ್ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. ಅಪ್ತ ಸಲಹೆ ಮಂದಾರಳಿಂದ ತಾಜುವಿನ ಜೀವನ ಸುಂದರ ನೀಲಿ ಆಗಿದೆ. ದಂಪತಿಗಳ ಕಥೆ ಇದಾಗಿದೆ. ಇದು ಫ್ಯಾಂಟಿಸಿ ನಿಜ ಆಗುವ ಕಥೆ. ಇದು ನಿದ್ರಾಹೀನತೆ ಬಗ್ಗೆ ಬೆಳಕು ಚೆಲ್ಲಿದೆ. ಚಂದಿಹುಡುಗ : ರಾಜು ಚಿಂದಿ ಹುಡುಗನಾದರೂ ತನ್ನ ಸ್ವಂತ ದುಡಿಮೆ ಪ್ರತಿಭೆಯಿಂದ ಉನ್ನತ ಸ್ಥಾನವೇರಿ ನೂರು ಜನರಿಗೆ ಧ್ವನಿಯಾದ, ದುಡಿಮೆಯೇ ಪ್ರಾಮುಖ್ಯತೆ ತಿಳಿಯುತ್ತದೆ ರಾಜುವಿನ ಸಾಧನೆ ಒದುಗರ ಮೆಚ್ಚುಗೆ ಗಳಿಸುತ್ತದೆ.
©2024 Book Brahma Private Limited.