ಲೇಖಕ ವಾಸುದೇವ ನಾಡಿಗ್ ಅವರ ಕಥಾಸಂಕಲನ ಕೃತಿ ʻಈ ಜನಗಳು ಈ ನರಕ ಈ ಪುಳಕʼ. ಇಲ್ಲಿನ ಕತೆಗಳಲ್ಲಿ ಸಂಬಂಧಗಳು, ಅದನ್ನು ಕಾಪಾಡಿಕೊಳ್ಳಲು ಜನ ಪಡುತ್ತಿರುವ ಪಾಡುಗಳು, ಸೂಕ್ಷ್ಮ ಭಾವಗಳು, ಏಕಾಂಗಿತನ, ಪ್ರಾಮಾಣಿಕತೆ, ಹತಾಶೆ ಎಂಬಂತೆ ಎಲ್ಲಾ ಭಾವೆನಗಳನ್ನು ಕಾಣಬಹುದು. ಈ ಎಲ್ಲಾ ನೋವುಗಳು ಪುರುಷ ಪಾತ್ರಗಳಲ್ಲಿ ಹೆಚ್ಚಾಗಿ ಗೋಚರಿಸುತ್ತಾ ಹೋಗುತ್ತದೆ. ಇದಕ್ಕೆ ಮುಖಾಮುಖಿಯಾಗುವಂತೆ ಸುನಂದ, ಭೈರವಿ, ಅಶ್ವಿನಿ, ಪೃಥಾ ಹೆಣ್ಣು ಜೀವಗಳು ಗಟ್ಟಿದನಿಯಲ್ಲಿ ಒಪ್ಪಿತ ಬದುಕಿಗೆ ಸಂವಾದಿಯಾಗುತ್ತಾ, ಭ್ರಾಮಕ ಜಗತ್ತಿನಿಂದ ಕೊಂಚ ಆಚೆಗೆ ಸರಿದು ನಿಂತು ಜೀವನವನ್ನು ನೋಡುತ್ತವೆ. ಹೀಗೆ ಪುಸ್ತಕದುದ್ದಕ್ಕೂ ಒಂದೊಂದು ಕತೆಗಳು ಎಲ್ಲ ಹೇಳಿಯೂ ಏನೂ ಹೇಳದಂತೆ ಬದುಕಿನ ಸಂಕೀರ್ಣತೆಯನ್ನು ಓದುಗರ ಮುಂದಿಡುತ್ತಾ ಹೋಗುತ್ತದೆ.
©2025 Book Brahma Private Limited.