ನೇಹಾ ರಾಣಿಯ ವಾಸ್ತವಿಕ ನೆಲಗಟ್ಟಿನಲ್ಲಿ ಕಟ್ಟಿಕೊಂಡ ಕಾಲ್ಪನಿಕ ಕಥೆಗಳು. ಈ ಎಲ್ಲ ಕಥೆಗಳಲ್ಲೂ ನೇಹಾರಾಣಿಯೇ ಕಥಾನಾಯಕಿ. ನೇಹಾರಾಣಿ ಎಲ್ಲರಂತೆ ಮುಗ್ಧ ಸ್ವಭಾವದ ಬಾಲಕಿ. ಅವಳಲ್ಲೂ ಕನಸುಗಳಿವೆ. ಅಶೆಗಳಿವೆ. ಜೀವನದ ಬಗೆಗಿನ ತುಡಿತವಿದೆ. ಪ್ರಾಣಿ ಪಕ್ಷಿಗಳ ಪ್ರೀತಿಯಿದೆ. ಸಮಾಜದ ಆಗು ಹೋಗುಗಳ ಕಡೆಗೆ ವಿಶೇಷ ಗಮನವಿದೆ. ತನ್ನ ಶಾಲೆಯ ಜೊತೆಜೊತೆಗೆ ಸಮಾಜದ ಆಗುಹೋಗುಗಳನ್ನು, ಅಕ್ಕಪಕ್ಕದವರನ್ನು, ಸ್ನೇಹಿತರನ್ನು ಒಬ್ಬ ಪ್ರೇಕ್ಷಕಿಯಾಗಿ ಗಮನಿಸುತ್ತಾಳೆ. ಆ ಸಮಸ್ಯೆಗಳ ಕುರಿತಾಗಿ ಅವ್ವನಿಗೆ, ಅಪ್ಪನಿಗೆ, ಶಿಕ್ಷಕರಿಗೆ, ಸ್ನೇಹಿತರಿಗೆ ಪ್ರಶ್ನೆ ಮಾಡುತ್ತಾಳೆ. ಆ ಪ್ರಶ್ನೆ ಮಾಡುವ ಸಹಜ ಸ್ವಭಾವವೇ ಈ ಕತೆಗಳ ಹುಟ್ಟಿಗೆ ಕಾರಣವಾಗಿದೆ ಎನ್ನಬಹುದು. ಈ ಕಥಾಸಂಕಲನದಲ್ಲಿ ಕೆಲವು ಚಿಲಿಪಿಲಿ ಪ್ರಕಾಶನದ ‘ಗುಬ್ಬಚ್ಚಿ ಗೂಡು’ ಮಕ್ಕಳ ಮಾಸಪತ್ರಿಕೆಯಲ್ಲಿ, ಇನ್ನು ಕೆಲವು ಅಜೀಂ ಪ್ರೇಮಜಿ ಫೌಂಡೇಶನ್ನಿನ ‘ಶಾಲ್ನುಡಿ’, ‘ಮಕ್ಕಳ ಮಂದಾರ’, ‘ಮಹಾಗುರು’ ಮುಂತಾದ ಇ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ವಿಮರ್ಶೆಗೆ ಪಾತ್ರವಾಗಿವೆ. ಮಕ್ಕಳ ಮಹರ್ಷಿ ಶಂಕರ ಹಲಗತ್ತಿ ಮಕ್ಕಳೇ ಮಕ್ಕಳಿಗಾಗಿ ಬರೆದ ಕಥೆಗಳನ್ನು ಪ್ರಕಟಿಸಿ ನಾಡಿನ ಮಕ್ಕಳಿಗೆ ಪ್ರೇರಣೆ ನೀಡಿದ್ದಾರೆ. ಅವರಲ್ಲಿ ನೇಹಾ ಕೂಡ ಒಬ್ಬಳು. ಈಗ ನೇಹಾಳ ಎರಡನೇ ಕೃತಿ ‘ನೇಹಾ ರಾಣಿ’ ಗೆ ಮುನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ.
©2024 Book Brahma Private Limited.