ಏಕಾಂತದ ನಿಟ್ಟುಸಿರು, ಹರೆಯದ ಪುಳಕ, ಕೀಳರಿಮೆಯ ಹತಾಶೆ, ತಬ್ಬಲಿತನದ ಬೇನೆ, ಪ್ರೀತಿ ಭಾವದ ರೋಮಾಂಚನ, ಪರೀಕ್ಷೆ ಗೆದ್ದ ಆತ್ಮವಿಶ್ವಾಸ, ಬಾವಿಕಟ್ಟೆ ಒದಗಿಸಿದ ನಿರಾಳತೆ, ರಥಬೀದಿ ಮತ್ತು ಪುಷ್ಕರಣಿಯ ನಡುರಾತ್ರಿಯ ಪಿಸುಮಾತು ಎಲ್ಲವೂ ಬೆರೆತ ಮೃದು ಮಧುರ ಬರಹಗಳ ಸಂಕಲನ. ಪ್ರತಿಯೊಬ್ಬರೊಳಗೊಂದು ಹಸಿರಾಗಿರುವ, ಪ್ರೇಮ ಪರಿಮಳದ, ಮತ್ತೆ ಮತ್ತೆ ಹೋಗಬಯಸುವ ಸಂತೋಷ ತುಂಬಿರುವ ಗೋಕುಲ ಇರುತ್ತದೆ. ಇದು ಕವಿಯಾಗಿ ಬೆಳೆದ ಆತಂಕದ ಅಮಾಯಕ ಹುಡುಗನ ಗೋಕುಲ ಕಥನ.
©2025 Book Brahma Private Limited.