ಅವಳೂ ಕತೆಯಾದಳು ಎಂಬುದು ಈ ಕತೆಯ ಹೆಸರು. ಹೆಸರಿನಿಂದಲೇ ಇದೊಂದು ಸ್ತ್ರೀ ಕೆಂದ್ರಿತ ಕತೆಯೆಂಬುದು ತಿಳಿದು ಬಿಡುತ್ತದೆ. ಅಂತೆಯೇ ಇಲ್ಲಿ ಒಬ್ಬ ಹುಡುಗಿಯ ಕತೆಯಿದೆ. ಬಹುಶಃ ಯಶವಂತ ಚಿತ್ತಾಲರ ಕತೆಯಾದಳು ಹುಡುಗಿ ಎಂಬ ಹೆಸರೂ ನೆನಪಿಗೆ ಬರುತ್ತದೆ. ಆದರೆ ಇಲ್ಲಿಯ ಕತೆಯೇ ಬೇರೆ. ಮನುವಿನ ವಯಸ್ಸು ಪ್ರೇಮಕತೆಗಳನ್ನು ಬರೆಯುವಂತದ್ದು. ಹಾಗಾಗಿ ಯಾವುದೋ ಪ್ರೇಮಕತೆಯೇ ಇರಬಹುದು ಎಂದುಕೊಂಡರೆ ಅದು ಸುಳ್ಳು ಎಂಬುದು ಕತೆ ಓದುತ್ತಾ ಹೋದಂತೆ ಗಮನಕ್ಕೆ ಬರುತ್ತದೆ. - ಡಾ. ವಿಜಯಕುಮಾರಿ ಎಸ್ ಕರಿಕಲ್ ನಿರ್ದೇಶಕರು ಹಾಗೂ ಪ್ರಾಧ್ಯಾಪಕರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ
©2025 Book Brahma Private Limited.