ಮಾಸ್ತಿ ವೆಂಕಟೇಶ ಅಯ್ಯಂಗಾರ (ಶ್ರೀನಿವಾಸ) ಅವರು ಬರೆದ ಕೃತಿ-ಸಣ್ಣಕಥೆಗಳ ಸಮಗ್ರ ಸಂಪುಟ. ಕನ್ನಡ ಸಾಹಿತ್ಯದಲ್ಲಿ ಸಣ್ಣ ಕಥೆಗಳ ಜನಕ ಎಂದೇ ಪ್ರಸಿದ್ಧರು. ಅತ್ಯಂತ ನವಿರಾದ ಭಾವಗಳಿಂದ, ಅರ್ಥಪೂರ್ಣ ಪಾತ್ರಗಳ ಸೃಷ್ಟಿಯಿಂದ, ಆತ್ಮೀಯವಾದ ನಿರೂಪಣಾ ಶೈಲಿಯಿಂದ, ಕುತೂಹಲ ಕೆರಳಿಸುವ ಸನ್ನಿವೇಶಗಳ ಜೋಡಣೆಯಿಂದ ಹಾಗೂ ಓದುಗರ ಮನವನ್ನು ಸೆಳೆಯುವ ಅತ್ಯಂತ ಪರಿಣಾಮಕಾರಿ ಪ್ರಭಾವದಿಂದ ಲೇಖಕರು ಸಣ್ಣ ಕಥೆಗಳ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
©2025 Book Brahma Private Limited.