'ಸಾಗರಸೃಷ್ಟಿಯ ಮೂಲಕ ತಮ್ಮ ಭಾವನೆಗಳ ಹಾಗು ಕಲ್ಪನೆಯ ಸಾಗರವನ್ನೇ ಓದುಗರಿಗೆ ನೀಡಿದ್ದಾರೆ. ಈ ಕಥಾ ಸಂಕಲನವು ಸಂತೋಷ ಕುಮಾರರ ಪರಿಶ್ರಮ, ಕಾಳಜಿ, ಸಾಧನೆಯ ಪ್ರತೀಕವಾಗಿದೆ. ಪ್ರತಿಯೊಂದು ಕಥೆಯ ವಸ್ತು, ಜೀವನದ ಮಜಲುಗಳಿಗೆ ಬಹಳ ಸಮೀಪವಾಗಿದೆ. 'ಹುಲಿ ಹೊಡೆದದ್ದು' ಕಥೆಯು ಓದುಗನನ್ನು ಕಾಡಿಗೆ ಸ್ವತಃ ಕರೆದುಕೊಂಡು ಹೋಗುವಲ್ಲಿ ಸಂಶಯವೇ ಇಲ್ಲ. 'ಶ್ವೇತಾಂಬರ- ಪೀತಾಂಬರ' ಕಥೆಯು ಈ ಪ್ರಪಂಚದಲ್ಲಿ ಮೋಸಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ನಾಣ್ಣುಡಿಗೆ ಸನಿಹವಾಗಿದೆ. ಅದೇ ರೀತಿ 'ಆರಕ್ಷಕ' ಕಥೆಯ ಕಥಾವಸ್ತು ಓದುಗನನ್ನು ಕುತೂಹಲ ಘಟ್ಟಕ್ಕೆ ಕರೆದುಕೊಂಡು ಹೋಗುವುದರಲ್ಲಿ ಅತಿಶಯೋಕ್ತಿಯಿಲ್ಲ. ಒಟ್ಟಿನಲ್ಲಿ 'ಸಾಗರ ಸೃಷ್ಟಿ' ಕಥಾ ಸಂಕಲನವು ಓದುಗರಿಗೆ ಮುಕ್ತವಾಗಿದೆ. ಬರವಣಿಗೆಯ ಶೈಲಿ ಸರಳವಾಗಿದೆ. ಸನ್ನಿವೇಶಗಳ ಕಲ್ಪನೆ, ಚಿತ್ರಣಗಳನ್ನು ಬರಹ ರೂಪದಲ್ಲಿ ಭಟ್ಟಿ ಇಳಿಸಿರುವುದು ನಿಜಕ್ಕೂ ಶ್ಲಾಘನೀಯ. 'ಸಾಗರಸೃಷ್ಟಿ' ಕಥಾಸಂಕಲನವು ಸಾಗರದಷ್ಟು ಅಗಾಧವಾದ ಓದುಗಬಳಗವನ್ನು ತಲುಪಲಿ ಎನ್ನುತ್ತಾರೆ ನ್ಯಾಯವಾದಿ ಬಿ.ಆರ್. ಪಲ್ಲವಿ.
©2024 Book Brahma Private Limited.