ಕನ್ನಡ ಕಾದಂಬರಿ ಲೋಕದ ಸಾಮ್ರಾಟ ಎಂದೇ ಖ್ಯಾತಿಯ ಅ.ನ.ಕೃಷ್ಣರಾಯರ ಸಮಗ್ರ ಕಥೆಗಳನ್ನು ಕೆ.ಟಿ. ಚಂದ್ರಶೇಖರ ಅವರು ಸಂಪಾದಿಸಿದ್ದಾರೆ. ಕಾದಂಬರಿಗಳಂತೆಯೇ ಅ.ನ.ಕೃ. ಅವರು ಸಣ್ಣ ಕಥೆಗಳನ್ನೂ ಬರೆದು ಸಹಸ್ರಾರು ಓದುಗರನ್ನು ಸೃಷ್ಟಿಸಿದ್ದು ಈಗ ಇತಿಹಾಸ. ಅವರ ಎಲ್ಲ ಕಥೆಗಳನ್ನು ಒಂದೆಡೆ ಸೇರಿಸಿದ ಈ ಕೃತಿಯು ಸಾಹಿತ್ಯಿಕ ಅಧ್ಯಯನಕ್ಕೆ ಪೂರಕವಾಗಿದೆ. ಸಾಹಿತ್ಯಕ ಓದುಗರ ಆಸಕ್ತಿ ಕೆರಳಿಸಿದೆ.
ಕೃತಿಗೆ ಮುನ್ನುಡಿ ಬರೆದಿರುವ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು, ಅನಕೃ ಅವರ ಕಥಾಸಾಹಿತ್ಯವನ್ನು ಕುರಿತಂತೆ ತರಾಸು, ದೇವೇಂದ್ರಕುಮಾರ ಹಕಾರಿ, ಮ.ಗ ಶೆಟ್ಟಿ ಶ್ರೀನಿವಾಸ ಉಡುಪ, ವಿ.ಪಿ ಕುಲಕರ್ಣಿ, ವೀರೇಗೌಡ ಮೊದಲಾದವರು ಚರ್ಚಿಸಿರುವುದನ್ನು ನಾವಿಲ್ಲಿ ಕಾಣಿಸಿಕೊಳ್ಳಬಹುದು. ಅನಕೃ ಅವರ ಕಥಾಸಾಹಿತ್ಯವನ್ನು ಇಡಿಯಾಗಿ ಗಮನಿಸಿದಾಗ ಥಟ್ಟನೆ ಗಮನ ಸೆಳೆಯುವ ಅಂಶವೆಂದರೆ ಅವರ ಕಥೆಗಳ ವಸ್ತುವಿಹಾರ. ‘ಇವರ ಕಥಾ ರಂಗದ ಮೇಲೆ ಬಂದು ಹೋಗುವ ಪಾತ್ರಗಳಲ್ಲಿ ಎಷ್ಟು ಬಗೆಯ ಜನ ಇತಿಹಾಸದ ಸುವರ್ಣ ಪುಟ್ಟದಲ್ಲಿ ಕಣ್ಮಮರೆಯಾದ ರಾಜರಾಣಿಯರು, ಧಾರ್ಮಿಕ ಪುರುಷರಿಂದ ಮೊದಲು ಮಾಡಿಕೊಂಡು ಇಂದಿನ ಸಮಾಜದ ಪಂಡಿತರು, ವಿಧವೆಯರು, ವೇಶ್ಯೆಯರು, ಗರತಿಯರು, ಹೆಜ್ಜೆತಪ್ಪಿದವರು, ವಿಟರು, ನಟರು, ಸಾಹಿತಿಗಳು, ಕಲಾವಿದರು, ರೈತರು, ಕ್ರಾಂತಿಕಾರರು, ಭಿಕ್ಷುಕರು, ಆದರ್ಶವಾದಿಗಳು, ರಸಿಕರು, ಹೊಟ್ಟೆಯ ಕೂಗಿನಲ್ಲಿ ದಿಕ್ಕುತಪ್ಪಿದವರು. ತಮ್ಮ ತಮ್ಮ ಜೀವನದ ರಾಜಕೀಯವೋ, ಸಾಮಾಜಿಕವೋ ನೈತಿಕವೋ, ಲೈಂಗಿಕವೋ ಯಾವುದೋ ಒಂದು ಸಮಸ್ಯೆಯಿಂದ ಸಮಾಜವನ್ನು ಸಮಸ್ಯೆಯ ಗೊಂದಲದಲ್ಲಿ ಅದ್ದಿದವರು. ಯೋಗಿಗಳು, ಭೋಗಿಗಳು, ಬಂಜೆಯವರು, ಬಯಕೆಗಳಿಗೆ ಬಲಿಯಾದವರು-ಎಂಥ ಗುಂಪು ಇದು! ಜೀವನದಲ್ಲಿ ಎಲ್ಲ ವೈವಿಧ್ಯಗಳನ್ನು ಕೃಷ್ಣರಾಯರು ತಮ್ಮ ಕಥೆಗಳಲ್ಲಿ ತರಲು ಪ್ರಯತ್ನಿಸಿದ್ದಾರೆ ಎಂದಿದ್ದಾರೆ.
ಈ ಕೃತಿಯು 69 ಕತಾನಕಗಳನ್ನು ಒಳಗೊಂಡಿದ್ದು ನನ್ನ ಮುದ್ದು ಸರೋಜ, ಶ್ರೀಪತಿ ಕಲ್ಯಾಣ, ಘಂಟೆ, ಪುನರುಜೀವನ, ಅವಳ ಬಾಳು, ಮುಂದೇನು ಗತಿ, ಪರಿಣಾಮ, ಕಂದ, ಸಾವಿತ್ರಿಯ ಸೌಭಾಗ್ಯ (?), ಕರುಳಿನ ಕೂಗು, ರಾಮೋತ್ಸವ, ಮುಗಿಯದ ಕಥೆ, ಹಾರ, ಗೆದ್ದವರು ಯಾರು?, ಸ್ವರ್ಗಸುಖ, ಯಾರ ಅನ್ನ ಯಾರ ಕೈಯಲ್ಲಿ?, ಆಚಾರ್‍ರ ಮದುವೆ, ರುದ್ರಪ್ಪ, ಗಂಗವ್ವನ ಆಶೆ, ಆ ನನ್ನ 'ತಂಗಿ', ವನ ಭೋಜನ, ಬೆಲೆ ಕಟ್ಟುವವರು ಯಾರು?, ರೆವರೆಂಡ್ ಡಾ. ರಂಗಸ್, ಸ್ಮರಣ, ಸಾಹಿತ್ಯ ಸಾರ್ವಭೌಮ, ಕಾಮನ ಸೋಲು, ಕಪ್ಪು ಮೋಡ, ಹಳದಿಯ ಬಾಗಿಲು, ಜ್ವಾಲೆ, ಸುಖಕ್ಕೆ ಸುಂಕ, ಪತಿತೆ, ಅಳಿಯ, ಡಿಕ್ರೂಸರ ಮೀಸೆ, ವಿಷಕನ್ಯೆ, ಕರೆಯುವ ಕಣ್ಣು, ಸ್ವಪ್ನ ಭಂಗ, ಗಣಿ ಕಲಿಸಿದ ಪಾಠ, ಜಾತಿಹೀನನ ಮನೆಯ ಜ್ಯೋತಿ, ಸಮಾಗಮ. ಹೆಣ್ಣು-ಹುಚ್ಚು, ಕಣ್ಣುಮುಚ್ಚಾಲೆ, ಅನ್ನದ ಕೂಗು, ಮಣ್ಣಿನ ಮಗ, ಮಧುರ ಸ್ವಪ್ನ, ದೊಡ್ಡ ಮನುಷ್ಯ, ಮೃತ್ಯುಶಾಂತಿ, ಪೂರ್ವ-ಪಶ್ಚಿಮ, ಗಿರಿಜವ್ವನ ರೊಟ್ಟಿ, ಅಗ್ನಿ ಕನ್ಯ, ಶಿಲ್ಪಿ, ಒಂದು ಸಂಜೆ, ಬೀದಿಯ ಹೆಣ್ಣು, ತಿಳಿವು ಮೂಡಿತು, ಗೌರಿ ನಕ್ಕಳು, ಮನದಲ್ಲಿ ಮಹರ್ಷಿ, ಸಮರ ಸುಂದರಿ, ಜೈಹಿಂದ್, ಎಲ್ಲಾದರೂ ಉಂಟೆ?, ಶಾಜಮಹಲ್ ಬೀಡಿ, ಕಾಯಕವೇ ಕೈಲಾಸ, ಪಾದಚಾರಿಯ ಪೆಡಂಭೂತ, ಆಗಸರ ರಂಗ, ದಾಸಿಗಳನ್ನು ಒಳಗೊಂಡಿದೆ.
©2024 Book Brahma Private Limited.