ಇದೊಂದು ದಿನ ನಿತ್ಯ ಕಾಣುವ ಒಂದಷ್ಟು ಘಟನೆಗಳಿಗೆ ಅಕ್ಷರ ರೂಪ ನೀಡಲಾದ ಸಣ್ಣ ಪ್ರಯತ್ನ .ಕೇವಲ ಕೆಲವೇ ನಿಮಿಷದಲ್ಲಿ ಓದಿ ಮುಗಿಸಬಹುದಾದ ಸುಮಾರು 35ಕ್ಕೂ ಅಧಿಕ ಕತೆಗಳು ಇಲ್ಲಿವೆ. ವಾಸ್ತವಿಕತೆಯ ಪ್ರಸ್ತಾಪದ ಜೊತೆಗೆ ಒಂದಷ್ಟು ಯುವಜನತೆಗೆ ಪುಸ್ತಕ ಪ್ರೀತಿ ಬೆಳೆಸುವ ಉದ್ದೇಶದಿಂದ ನನ್ನ ಪ್ರಥಮ ಪ್ರಯತ್ನ ನಡೆದಿದೆ . ಇದೊಂದು ಕಲಿಕೆಯ ಹಾದಿಯ ಮಗುವಿನ ಸಣ್ಣ ಪ್ರಯತ್ನವಷ್ಟೇ ..ಇಲ್ಲಿ ಹಲವು ತಪ್ಪುಗಳಿರಬಹುದು ..ಎಷ್ಟಾದರೂ ಕಲಿಯುವಾಗ ಎಡವುದು ಸಹಜವಲ್ಲವೇ ?ಇವೆಲ್ಲವನ್ನು ತಮ್ಮ ಮನದ ಜೋಳಿಗೆಯ ಮೂಲೆಯಲ್ಲಿರಿಸಿ ನನ್ನನ್ನು 'ನಿಮ್ಮಮನೆಯಅಕ್ಷರ ದೀಪವೇಂದೇ ಭಾವಿಸಿ ' ನನ್ನ ಮುಂದಿನ ಬರವಣೆಗೆ ಪ್ರೇರಣೆ ನೀಡುವಿರಿ ಎಂಬ ನಂಬಿಕೆಯೊಂದಿಗೆ ಈ 'ಮನವು ಮಾತಾಡಿದ 'ವಿಚಾರಗಳನ್ನು ಪುಸ್ತಕ ರೂಪದಲ್ಲಿ ನಿಮ್ಮ ಕೈಗಿತ್ತಿದ್ದೇನೆ ..ಇಲ್ಲಿ ಅಮ್ಮಾ ಕತೆಯಾಗಿದ್ದಾರೆ ..ಹಿರಿಯ ಜೀವವೊಂದು ಮಾತಾಡಿದೆ ..ತಂಗಿ ಪ್ರೇರಣೆಯಾಗಿದ್ದಾಳೆ. ಕಾಗದದ ದೋಣಿ ತೇಲಿದೆ ..ಮಾಯೆಯೊಂದು ಸುತ್ತು ಹಾಕಿದೆ ..ಚಿತ್ರಮಂದಿರದ ಎದುರಿನ ಪೋಸ್ಟರ್ ರಾರಾಜಿಸಿದೆ..ಮಗುವಿನ ನಗು ಅರಳಿದೆ...ಗಣಪನ ಗುಡಿಯಲ್ಲಿ ಬೆಳಕು ಕಂಡಿದೆ ..ಎಂಟನೆಯ ಮಹಡಿ ಹತ್ತಿ ಮಾತು ಆರಂಭವಾಗಿದೆ ..ಸೇತುವೆಯ ನಿರ್ಮಾಣ ವಾಗಿದೆ ..ಧಣಿಗಳ ಮನೆ ಯ ದರ್ಶನವಾಗಿದೆ..ದೀಪದ ಬೆಳಕು ಪ್ರಕಾಶ ಬೀರಿದೆ ..ಜೊತೆಗಾತಿ ಕೈ ಹಿಡಿದು ಹಜ್ಜೆ ಹಾಕಿದ್ದಾಳೆ ..ಒಡೆಯ ಕರುಣೆ ತೋರಿದ್ದಾನೆ..ಕನಸು ನನಸಾಗಿದೆ ..ತೊಟ್ಟಿ ತುಂಬಿ ತುಳುಕಿದೆ ..ಮೊಸರು ಕುಡಿಕೆಯ ಕುಡಿಕೆ ಒಡೆದಾಗಿದೆ ..ಹುಡುಗ ಬೀದಿಯುದ್ದಕ್ಕೂ ಅಳೆದಿದ್ದಾನೆ ..ದಾಖಲೆ ದಾಖಲಾಗಿದೆ ..ಬಾಗಿಲು ತೆರೆದಾಗ ಸೈನಿಕನ ಮಾತು ಕೇಳಿದೆ ...ಒಡಲ ಬೇನೆ ಕೇಳಿದೆ ..ಇವಲ್ಲವನ್ನು ಕಂಡು ಕೇಳಿ ಮನವು ನಿಮ್ಮೊಂದಿಗೆ ಹೀಗೆ ಮಾತನಾಡಿದೆ ...ಈ "ಮನವು ಮಾತಾಡಿತು " ಪುಸ್ತಕ ದಿಂದ ಸಂಗ್ರಹವಾಗುವ ಮೊತ್ತದ ಒಂದಷ್ಟು ಮೊತ್ತವನ್ನು ತೀರಾ ಸಂಕಷ್ಟದಲ್ಲಿ ಓದು ಮುಂದುವರಿಸಲು ಅಸಾಧ್ಯ ವಾದ ಮನೆಯ 'ಅಕ್ಷರ ದೀಪ"ವನ್ನು ಬೆಳಗಿಸಲು ವಿನಿಯೋಗಿಸ ಬೇಕೆಂದು ತೀರ್ಮಾನಿಸಿದ್ದೇನೆ ..ನನ್ನ ಈ ಪ್ರಥಮ ಪ್ರಯತ್ನ ದ "ಬರಹದ ಗುಚ್ಛ ವನ್ನು ಪ್ರೀತಿಯಿಂದ ಕತ್ತಲು ಕವಿದಿರುವ ಮನೆಯ ಅಕ್ಷರ ದೀಪ ಬೆಳಗಲು ನೀವೂ ನನ್ನೊಂದಿಗೆ ಕೈಜೋಡಿಸುವಿರಿ ಎಂಬ ಆಶಯದೊಂದಿಗೆ ಮಾತಿಗೆ ವಿರಾಮ ನೀಡುತ್ತೇನೆ - ಗಣೇಶ್ ನಾಯಕ್
©2024 Book Brahma Private Limited.