‘ಶ್ರೀನಿವಾಸ ಜೋಕಟ್ಟೆ ಸಮಗ್ರ ಕತೆಗಳು’ ಈ ಕೃತಿಯಲ್ಲಿ ಶ್ರೀವಾಸ ಜೋಕಟ್ಟೆ ಅವರ 58 ಕತೆಗಳು ಸಂಕಲನಗೊಂಡಿವೆ. ಈ ಕೃತಿಗೆ ಲೇಖಕರಾದ ಜೋಗಿ, ಡಾ.ಬಿ.ಜನಾರ್ದನ ಭಟ್, ಅರವಿಂದ ಚೊಕ್ಕಾಡಿ, ಜಯರಾಮ ಕಾರಂತ, ಬಿ.ಎಂ.ಬಶೀರ್ ಅವರು ವಿವಿಧ ಪತ್ರಿಕೆಗಳಿಗೆ ಬರೆದ ಅನಿಸಿಕೆಗಳು ಬೆನ್ನುಡಿ ಬರಹದಲ್ಲಿವೆ. ಕತೆಗಳ ಕುರಿತು ಬರೆಯುತ್ತಾ ‘ಮುಂಬಯಿಯ ನಿತ್ಯದ ಓಡಾಟಗಳ ನಡುವೆ ಧುತ್ತೆಂದು ಕಥೆಗಳು ಹುಟ್ಟಿಕೊಳ್ಳುವುದು, ಮಧುರ ಭಾವಗಳು ಅರಳುವುದು ಶ್ರೀನಿವಾಸ ಜೋಕಟ್ಟೆಯವರ ಕಥೆಗಳ ವೈಶಿಷ್ಟ್ಯ, ಹಾಗಾಗಿ ಅವರ ಕಥೆಗಳು ಬೋರು ಹೊಡೆಸುವುದೇ ಇಲ್ಲ. ಘಟನೆಗಳು, ಸಂಭಾಷಣೆಗಳು, ನಡುನಡುವೆ ಸುಳಿಯವ ಸೆಳೆಮಿಂಚಿನಂತಹ ಒಳತೋಟಿಗಳು ಕಥೆಗಳ ಆಕರ್ಷಣೆಗೆ ಕಾರಣವಾಗಿವೆ. ಸುಧೀರ್ಘ ವೈಚಾರಿಕ ಚರ್ಚೆಗಳು, ಸನ್ನಿವೇಶ ವರ್ಣನೆಗಳಲ್ಲಿ ಅವರ ಕಾಲವ್ಯಯ ಮಾಡುವುದಿಲ್ಲ’ ಎನ್ನುತ್ತಾರೆ ಡಾ.ಬಿ. ಜನಾರ್ಧನ ಭಟ್.
©2025 Book Brahma Private Limited.