ಲೇಖಕಿ ಪದ್ಮಿನಿ ನಾಗರಾಜ್ ಎಸ್.ಪಿ. ಅವರ ಕಥಾಸಂಕಲನ ಕೃತಿ ʻಸಮಾಧಿ ಮೇಲಿನ ಹೂʼ. ಮುಸ್ಲಿಂ ಹೆಣ್ಣುಮಕ್ಕಳ ದಾರುಣ ಬದುಕಿನ ಮೂರು ತಲೆಮಾರುಗಳು, ಪುರುಷ ಸಮಾಜದ ದಬ್ಬಾಳಿಕೆ, ರೈತರ ಆತ್ಮಹತ್ಯೆ, ತೃತೀಯ ಲಿಂಗಿಗಳ ಬಗ್ಗೆ ಪೋಷಕರು-ಸಮಾಜ-ಸರಕಾರದ ಜವಾಬ್ದಾರಿಗಳು, ಮಕ್ಕಳನ್ನು ನೋಡಿಕೊಳ್ಳುವುದರ ಬಗೆಗಿನ ತಾತ್ಸಾರ, ಕ್ಯಾನ್ಸರ್ ಕಾಯಿಲೆ ತರುವ ಸಂಕಷ್ಟ ಮುಂತಾದ ಸತ್ಯ ಘಟನೆಗಳ ಆಧಾರಿತ 11 ಕತೆಗಳು ಇಲ್ಲಿವೆ. ಜೊತೆಗೆ ಮಲೆನಾಡಿನ ಗ್ರಾಮೀಣ ಬದುಕು, ಪೂಜೆ, ಹಬ್ಬಗಳಲ್ಲಿ ಸಹಜವಾಗಿ ಬರುವ ಕನ್ನಡ ಬಳಕೆಯ ಪದಗಳು ಹಾಗೂ ಅಲ್ಲಿನ ಪರಿಸರದ ಸಣ್ಣ ಪುಟ್ಟ ಸಂಗತಿಗಳ ಸಹಿತ ಕತೆಗಳ ಮೂಲಕ ಪದ್ಮಿನಿ ಅವರು ಕಟ್ಟಿಕೊಟ್ಟಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಕನಸುಗಳ ಕೈ ಹಿಡಿದು, ಸಾವಿನ ನಿರೀಕ್ಷೆ, ತಪ್ತ, ಸಮಾಧಿ ಮೇಲಿನ ಹೂ, ತನು ಕರಗದವರಲ್ಲಿ, ಸಾವಿರ ಸುಳ್ಳನ್ನು ಹೇಳಿ, ಮನದ ತಕ್ಕಡಿ, ಸ್ವಲ್ಪ ಅಡ್ಜಸ್ಟ್, ಧ್ಯಾನ, ಹಸ್ತ ಮೈಥುನ, ಅಪ್ಪ ಮತ್ತು ಮಾತು ಮುಂತಾದ ಶೀರ್ಷಿಕೆಗಳ ಕತೆಗಳಿವೆ.
©2024 Book Brahma Private Limited.