‘ಮಕ್ಕಳ ಸಮಗ್ರ ಕಥೆಗಳು’ ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ಅವರು ಮಕ್ಕಳಿಗಾಗಿ ರಚಿಸಿರುವ ಕತಾಸಂಕಲನ. ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿರುವ ಸಿದ್ಧಲಿಂಗಪ್ಪ ಅವರು ಸರಳ ಭಾಷೆಯಲ್ಲಿ ಮಕ್ಕಳ ಮನೋಲೋಕ ವಿಸ್ತಾರವಾಗಲು ಬೇಕಾಗುವಂತಹ ಕತೆಗಳನ್ನು ರಚಿಸಿದ್ದಾರೆ.
ಈ ಕೃತಿಯಲ್ಲಿ ಜಾಣಮಗ, ಕುದುರೆಯ ಸಹವಾಸ, ಕಡುಬಿನ ಅಳಿಯಂದಿರು, ಆಗೊಂದುಸಲ ಈಗೊಂದು ಸಲ, ಸುಳ್ಳಿನ ಫಲ, ಅಳತೆಯ ಮೋಸ, ಅಸೂಯೆಯ ಫಲ, ಅತಿಯಾಸೆ ಗತಿಗೇಡು, ನಂಬಿಕೆಯ ಮೋಸ, ಸೇರಿಗೆ ಸವಾಸೇರು, ಮುತ್ತಿನ ಚೀಲ, ಕಾಳಿನ ಚೀಲಗಳು, ಮುತ್ತಿನ ಹಂಚಿಕೆ, ಜಾಣಪದ ಜಾಣ, ಹುಡುಗಿಯ ಜಾಣತನ, ಮುರಿಯದೆ ಮೂರು ಜನರಿಗೆ ಹಂಚು, ಅಜ್ಜಿಯ ಒಗಟು, ದುಡಿತದ ಫಲ, ಹೂಮುಡಿಸುವ ಲೆಕ್ಕ, ನೀನು ಬಂದರೆ ನೂರು ಗಿಣಿ, ನಾನೂರು ರೂಪಾಯಿಗೆ ನಾನೂರು, ಕುದುರೆಯ ಮಾರಾಟ, ನೂರು ಜನಕೆ ನೂರು ರೂಪಾಯಿ, ಬಾಳೆಹಣ್ಣು ಮಾರಿದ ಜಾಣರು, ಬೆಕ್ಕು ತಿಂದ ಇಲಿಗಳ ಲೆಕ್ಕ, ಸುಂಕನೀಡಿ ಸಂತೆಗೆ ಬಂದ ಕುರಿಗಳು, ಎರಡು ಮಾತು ಪರಿಹಾರ ಒಂದು, ಬಾಳೆಕಾಯಿ ಹಂಚಿಕೊಂಡ ಏಳು ಜನ, ಕುದುರೆಯ ಲೆಕ್ಕ, ಹಣ್ಣಿನ ಹಂಚಿಕೆ, ಹಿಂದೆ ಮುಂದೆ ನೋಡಿ ಸ್ವಾಮಿ, ಹನುಮಂತ ದೇವರ ಮುಖ ಸೊಟ್ಟಗಾಗಲಿ, ಆಗುವುದೆಲ್ಲ ಒಳ್ಳೆಯದಕ್ಕೆ, ದೇವರಿಗೆ ಪೂಜಿಸಿದ ಹೂವುಗಳೆಷ್ಟು, ಏಳು ಜನರಿಗೆ ಏಳು ಚಿನ್ನದ ಗಟ್ಟಿಗಳು ಸೇರಿದಂತೆ 67ಕತೆಗಳಿವೆ.
©2025 Book Brahma Private Limited.