ವಸಂತಕುಮಾರ್ ಕಲ್ಯಾಣಿ ಅವರ ಕಥಾಸಂಕಲನ ಕೃತಿ ʻಪರ್ಯಾಪ್ತʼ. ದಿನನಿತ್ಯ ಎದುರು ಬರುವ ನೆರೆಹೊರೆಯವರ ನಡೆಗಳನ್ನೇ ಗಮನಿಸಿ, ವಿಶ್ಲೇಷಿಸಿ ಜೀವನದ ವಿಶೇಷ ಅರ್ಥವನ್ನು ಕಂಡುಕೊಂಡು ಒಂದೊಂದು ಕತೆಯ ಮೂಲಕ ನಿರೂಪಣೆ ಮಾಡಿದ್ದಾರೆ. ಜೊತೆಗೆ ಹಾಸ್ಯದಿಂದ ಕೂಡಿದ ಸನ್ನಿವೇಶಗಳೂ ಇಲ್ಲಿವೆ. ಸಮಕಾಲೀನ ಬದುಕಿನ ಮುಖಗಳಿಗೆ ಹಿಡಿದ ಕನ್ನಡಿಯಾಗಿಯೂ ಈ ಕಥಾಸಂಕಲನ ಕಾಣುತ್ತದೆ. ಪುಸ್ತಕದ ಪರಿವಿಡಿಯಲ್ಲಿ; ಯಾರೂ ಕಾಯುವರಿಲ್ಲ, ಮಳೆರಾಯ, ಹರಿಚಿತ್ತ, ಗತ, ಆಯ್ಕೆ, ಸಿಹಿ ಕನಸು, ಮಾಯೆ ನಿನ್ನೊಳಗೋ, ಕಳ್ಳರ ಸಂತೆ, ಪರ್ಯಾಪ್ತ ಮುಂತಾದ ಶೀರ್ಷಿಕೆಗಳ ಕತೆಗಳಿವೆ.
©2025 Book Brahma Private Limited.