ಪ್ರೇಮಪತ್ರದ ಆಫೀಸು ಮತ್ತು ಅವಳು ಶಿವಕುಮಾರ ಮಾವಲಿ ಅವರ ಕೃತಿಯಾಗಿದೆ. ಇಲ್ಲಿ ಪ್ರೇಮಪತ್ರಗಳನ್ನು ಬರೆದು ಕೊಡಲಾಗುತ್ತದೆ ಎಂದು ಬೋರ್ಡ್ ನೇತು ಹಾಕಿಕೊಂಡು ಕೂತವನ ಬಳಿ ಯಾರೊಬ್ಬರೂ ಸುಳಿಯಲಿಲ್ಲ. ಲೋಕದಲ್ಲಿ ಎಷ್ಟೊಂದು ಪ್ರೇಮವಿದೆ, ಎಷ್ಟೊಂದು ಪ್ರೇಮಿಗಳಿದ್ದಾರೆ, ಹಾಗಿದ್ದೂ ಯಾಕೆ ಯಾರೂ ತನ್ನ ಬಳಿ ಬರುತ್ತಿಲ್ಲ? ಎಲ್ಲರಿಗೂ ಖುದ್ದಾಗಿ ಪ್ರೇಮಪತ್ರಗಳನ್ನು ಬರೆಯುವಷ್ಟು ಸಮಯ ಮತ್ತು ಸಂಯಮ ಇರುವುದಾದರೂ ಸಾಧ್ಯವೆ? ಎಂದು ಯೋಚಿಸಿ ತನ್ನ ಲೆಕ್ಕಾಚಾರ ಬುಡಮೇಲಾಗುತ್ತದೇನೋ ಅನ್ನಿಸಿ, ಇನ್ನೇನು ಈ ಆಫೀಸು ಮುಚ್ಚುವುದೇ ಒಳ್ಳೆಯದೇನೋ ಎಂಬ ತೀರ್ಮಾನಕ್ಕೆ ಬರುವವನಿದ್ದ. ಅಷ್ಟರಲ್ಲಿ, ಮೂವತ್ತರ ಆಸುಪಾಸಿನ ಯುವತಿಯೊಬ್ಬಳು ಆ ಆಫೀಸಿಗೆ ಬಂದು, ಒಂದು ಪ್ರೇಮ ಪತ್ರ ಬರೆದು ಕೊಡಬೇಕೆಂದು ಬೇಡಿಕೆಯಿಟ್ಟಳು. 'ಪ್ರೇಮಕವಿಗೆ ನಮಸ್ಕಾರ' ಎಂದೆ. 'ಕವಿಗೆ ನಮಸ್ಕಾರ ಎಂದರೆ ಸಾಕು, ಪ್ರೇಮವಿಲ್ಲದವನು ಕಏ ಹೇಗಾಗುತ್ತಾನೆ?' ಎಂಬ ದೃಢವಾದ ಉತ್ತರ ಬಂತು. ನಾನದನ್ನು `ಪ್ರೇಮವಿಲ್ಲದವನು ಮನುಷ್ಯ ಹೇಗಾಗುತ್ತಾನೆ?' ಎಂದೇ ಕೇಳಿಸಿಕೊಂಡೆ ಎನ್ನುತ್ತಾರೆ ಶಿವಕುಮಾರ ಮಾವಲಿ ಪುಸ್ತಕದ ಬೆನ್ನುಡಿಯಲ್ಲಿ .
https://vistaranews.com/attribute-246969/2023/02/26/sunday-read-new-kannada-book-extract-by-shivakumar-mavali/ - (ವಿಸ್ತಾರ)
©2025 Book Brahma Private Limited.