ರಾಘವೇಂದ್ರ ಖಾಸನೀಸ್
(02 March 1933 - 19 March 2007)
ರಾಘವೇಂದ್ರ ಖಾಸನೀಸರು ವಿಜಾಪುರ ಜಿಲ್ಲೆಯ ಇಂಡಿಯವರು. (ಜನನ 02-03-1933) ತಂದೆ ನಾರಾಯಣ ಖಾಸನೀಸ, ತಾಯಿ ಕಮಲಾಬಾಯಿ. ಆರ್ಥರ್ ಕಾನನ್‌ಡೈಲ್, ಶರ್ಲಾಕ್‌ಹೋಮ್ಸ್‌ನ ಪತ್ತೇದಾರಿ ಕಾದಂಬರಿಗಳು ಮತ್ತು ದೆವ್ವದ ಕಥೆಗಳನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಮಗನಿಗೆ ಹೇಳುತ್ತಿದ್ದರಿಂದ ಸಾಹಿತ್ಯಾಸಕ್ತಿ ಬೆಳೆದಿತ್ತು. ಪ್ರೌಢಶಾಲೆಯವರೆಗೆ ಓದಿದ್ದು ವಿಜಾಪುರದಲ್ಲಿ, ಮಾಧ್ಯಮಿಕ ಶಾಲೆಯಲ್ಲಿದ್ದಾಗ ತಿ.ತಾ.ಶರ್ಮರ ವಿಶ್ವಕರ್ನಾಟಕದಲ್ಲಿ ಇವರ ಕಥೆ ಪ್ರಕಟವಾಗಿತ್ತು. ಧಾರವಾಡದಲ್ಲಿ ಕಾಲೇಜು ಓದುತ್ತಿದ್ದಾಗ ‘ಸ್ವರ್ಗದಬಾಗಿಲು’, ಗೋಕಾಕರ ‘ಸಮರಸವೇ ಜೀವನ’ ಕಾದಂಬರಿಗಳಿಗೆ ವಿಮರ್ಶೆ ಬರೆದಿದ್ದರು.ಬಿ.ಎ. ಪದವಿಯ ನಂತರ ಮುಂಬಯಿಯ ಎನ್‌ಫಿನ್ಸ್‌ಟನ್ ಕಾಲೇಜಿನಿಂದ ಪಡೆದ ಎಂ.ಎ. (ಇಂಗ್ಲೀಷ್) ಪದವಿ ಜೊತೆಗೆ ಮುಂಬಯಿ ವಿಶ್ವವಿದ್ಯಾಲಯದಿಂದ ಗಳಿಸಿದ್ದು ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮಾ..ಪುಣೆಯ ಎಸ್.ಪಿ. ಕಾಲೇಜಿನ ಗ್ರಂಥಾಲಯದಲ್ಲಿ ಉದ್ಯೋಗ. ವಲ್ಲಭ ...
READ MORE