ಕಸೂತಿಯಾಗದ ದಾರದುಂಡೆ ರೇವತಿ ಶೆಟ್ಟಿ ಕೋಟ ಪ್ರಥಮ ಕಥಾ ಸಂಕಲನವಾಗಿದೆ. ಈ ಹೆಣ್ಣು ಜೀವಗಳ ಅಂತರಂಗದಲ್ಲೊಂದು ಸಹೃದಯ ಮನಸ್ಸನ್ನ ಕಲುಕುವ, ರಪ್ಪನೆ ಕೆನ್ನೆಗೆ ಬಡಿದು ಎಚ್ಚರಗೊಳಿಸುವ,ಆಹಾ ಎಷ್ಟು ಚಂದದ ನಿರೂಪಣೆ ಎನ್ನುತ್ತಲೇ ವಿಷಾದದ ಭಾರವನ್ನು ಎದೆಯಲ್ಲಿ ನೆಟ್ಟುಹೋಗುವ ಗಟ್ಟಿಯಾದ ಧ್ವನಿಗಳಿವೆ. ಎಲ್ಲೂ ಜಾಳೆನಿಸದ ಬೋರೆನಿಸದ ಕತೆಗಳಿವು. ಯಾವ ಇಸಂಗಳ ಸೋಂಕಿಲ್ಲದ ಅಪ್ಪಟ ದೇಶೀ ಸೊಗಡಿನ ಕಟು ವಾಸ್ತವದ ನೋಟಗಳು ಲೇಖಕಿಯದ್ದು. ಕಥಾವಸ್ತುಗಳು ನಗರ ಮತ್ತು ಹಳ್ಳಿ ಬದುಕಿನ ಬದಲಾಗುತ್ತಿರುವ ಓಟದ ಸೂಕ್ಷ್ಮ ನೋಟವಾಗಿದೆ. ಓದಿ ಮುಗಿಸಿದಾಗ ಒಂದಿಷ್ಟು ಪಾತ್ರಗಳು ಕಾಡಿದರೆ ಮತ್ತೊಂದಿಷ್ಟು ಸನ್ನಿವೇಶಗಳು ಅರಿಯದೆಯೇ ಕಣ್ಣುಂಬಿಸುತ್ತವೆ. ಮೊದಲ ಕಥಾಸಂಕಲನವೆಂಬ ಯಾವ ರಿಯಾಯಿತಿಯೂ ಬೇಕಿಲ್ಲದ ಪ್ರಬುದ್ಧ ಬರಹಗಾರ್ತಿಯ ಕಥೆಗಳಿವು.
©2025 Book Brahma Private Limited.