ಮಂಜುನಾಥ ಚಾಂದ್ ಅವರ ಅಮ್ಮಕೊಟ್ಟ ಜಾಜಿದಂಡೆ ಇದು_ಬರಿಯ_ಘಮವಲ್ಲ. ಕೇವಲ ನೂರು ಪುಟಗಳಲ್ಲಿ ತನ್ನ ತಾಯಿಯ ಬದುಕನ್ನೇ ಲೇಖಕ ತೆರೆದಿಟ್ಟ ಕಥೆಯಿದು. ಕಥೆ ಓದಿದ ನಂತರ, ಪುಸ್ತಕದ ಶೀರ್ಷಿಕೆ ಎಷ್ಟು ಅರ್ಥವತ್ತಾಗಿದೆ ಎನಿಸಿತು. ಇಂದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ. ಗಂಡು ಮಕ್ಕಳಿಗೂ ಬದುಕುವ ರೀತಿಯನ್ನು ತಾಯಿ ತಂದೆಯರು ಕಲಿಸಿ ಕೊಡಬೇಕಾದ ಕಾಲ. ಇಂಥ ಕಾಲದಲ್ಲಿ ಸೂಚ್ಯ ವಾಗಿ ಮಗನಿಗೆ ಕೆಲಸ ಕಲಿಸಿಕೊಟ್ಟ ಒಬ್ಬ ತಾಯಿಯ ಬಗೆಯನ್ನು ಲೇಖಕರು ಸುಮಾರು ೧೨ ಅಧ್ಯಾಯ ಗಳಲ್ಲಿ ಚಿತ್ರಿಸಿದ್ದಾರೆ. ಒಬ್ಬ ತಾಯಿ ಹೇಗೆ ತಾನು ಬಿಡುವಿಲ್ಲದೆ ದುಡಿಯುತ್ತಾ ತನ್ನ ಮಕ್ಕಳಿಗೂ ದುಡಿಯುವ ಕೌಶಲ ಮತ್ತು ಉತ್ಸಾಹ ತುಂಬುತ್ತಾಳೆ ಎಂಬುದರ ಕಥನ ಅತಿ ಸರಳವಾಗಿ ಬಂದಿದೆ.
©2025 Book Brahma Private Limited.