'ಕರ್ನಾಟಕದಲ್ಲಿನ ಬೇರೆ ಬೇರೆ ಸಮುದಾಯಗಳ ಮೇಲೆ ಅಪಾರ ಪ್ರಮಾಣದಲ್ಲಿ ಅಧ್ಯಯನಗಳು ನಡೆದಿವೆ. ಆದರೆ ಎಲ್ಲವೂ ಒಂದು ಚೌಕಟ್ಟಿನಡಿಯಲ್ಲಿ ಬಂಧಿತವಾದಂತೆ ಕಾಣುತ್ತವೆ. ಈ ಕೃತಿಯಲ್ಲಿ ಸಿದ್ಧಸೂತ್ರದಿಂದ ಹೊರಬಂದು, ಒಂದು ಸಮುದಾಯವನ್ನು ಪರಿಚಯಿಸುವ ಯತ್ನ ಕಾಣುತ್ತಿದೆ' ಎಂದು ಡಾ.ರಹಮತ್ ತರೀಕೆರೆಯವರು ಟಿಪ್ಪಣಿಯಲ್ಲಿ ಹೇಳುತ್ತಾರೆ. ಲೇಖಕರು ಕಾಡುಗೊಲ್ಲ ಜನಾಂಗವನ್ನು ಬಹಳ ಕಾಲದಿಂದ ಅಧ್ಯಯನ ಮಾಡಿದ್ದಾರೆ ಮತ್ತು ಅದನ್ನು ವಿಭಿನ್ನ ನೆಲೆಯಲ್ಲಿ ಪರಿಚಯಿಸುವ ಯತ್ನ ಮಾಡಿದ್ದಾರೆಂಬುದು ಕೃತಿಯನ್ನು ಓದುತ್ತ ಹೋದಂತೆ ತಿಳಿಯುತ್ತದೆ.
'ಕೃತಿಯ ಒಡಲೊಳಗೆ ಕಾಡುಗೊಲ್ಲ ಬುಡಕಟ್ಟಿನ ಚಾರಿತ್ರಿಕ ಸಂಗತಿಗಳನ್ನೊಳಗೊಂಡಂತೆ ಸಾಂಸ್ಕೃತಿಕ ಪರಂಪರೆ, ಮೌಖಿಕ ಕಥನಗಳ ಪರಿಕಲ್ಪನೆಗಳು, ಈ ಕಥನದೊಳಗಿನ ವಿವಿಧ ಸ್ವರೂಪದ ಸಂಘರ್ಷದ ನೆಲೆಗಳು, ಕಾಡುಗೊಲ್ಲರ ಬದುಕಿನ ಸ್ಥಿತ್ಯಂತರಗಳು, ವಿವಿಧ ಅಧ್ಯಯನಗಳನ್ನು ಒಂದೆಡೆ ತಂದು ವಿಶ್ಲೇಷಣೆಗೆ ಒಳಪಡಿಸುವ ಪ್ರಯತ್ನ ಮಾಡಿರುವೆ ಎಂದು ಲೇಖಕರು ಕೃತಿಯ ಮೊದಲ ಮಾತಿನಲ್ಲಿ ಹೇಳಿದ್ದಾರೆ.
©2024 Book Brahma Private Limited.