ಖ್ಯಾತ ವಿಮರ್ಶಕ ಹಾಗೂ ಕಥೆಗಾರ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಸಮಗ್ರ ಕಥೆಗಳನ್ನು ಸಂಗ್ರಹಿಸಿದ ಕೃತಿ ಇದು. ಭಾರತೀಯ ಸಾಮಾಜಿಕತೆ, ಸಂಸ್ಕೃತಿ, ಸನಾತನ ಇತ್ಯಾದಿ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಕಥಾ ವಸ್ತುವಿನ ಆಯ್ಕೆಯೊಂದಿಗೆ ರಚಿಸಿರುವ ಸಣ್ಣ ಕಥೆಗಳು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಗಮನ ಸೆಳೆಯುತ್ತವೆ. ಅಲ್ಲದೇ, ಲೇಖಕರ ಕಥೆ ರಚನೆಯ ವಿಚಾರ ಕ್ರಮ, ಆಶಯ ಎಲ್ಲವುಗಳ ಅಧ್ಯಯನಕ್ಕೆ ಈ ಕೃತಿಯು ಆಕರವೂ ಆಗಿದೆ.
©2025 Book Brahma Private Limited.